ನನ್ನ ಮಗ ಆರ್ಯ (5 ವರ್ಷ) ಅಂಧತ್ವದಿಂದ ಬಳಲುತ್ತಿದ್ದಾನೆ. ಶಸ್ತ್ರಚಿಕಿತ್ಸೆ ಮಾಡಿದರೆ ಗುಣವಾಗಬಹುದು ಎಂದು ಬನ್ನೇರುಘಟ್ಟ ರಸ್ತೆಯ ಅಗರವಾಲ್ ಆಸ್ಪತ್ರೆ ವೈದ್ಯರು ಹೇಳುತ್ತಿದ್ದಾರೆ. ಇದಕ್ಕೆ 50ಸಾವಿರವಾದರೂ ಬೇಕು.
ಬೀದಿ ಕಸಗುಡಿಸಿ ಹೊಟ್ಟೆ ಹೊರೆದುಕೊಳ್ಳುತ್ತಿರುವ ನನಗೆ ಮಗನಿಗೆ ಶಸ್ತ್ರಚಿಕಿತ್ಸೆಗೆ ಬೇಕಾಗುವ ಹಣ ಒದಗಿಸಲು ಸಾಧ್ಯವಾಗುತ್ತಿಲ್ಲ. ಉದಾರಿಗಳು ಬಸವೇಶ್ವರನಗರದ ಸಿಂಡಿಕೇಟ್ ಬ್ಯಾಂಕ್‌ನಲ್ಲಿರುವ ನನ್ನ ಉಳಿತಾಯ ಖಾತೆ ಸಂ. 004482010035480 ಇಲ್ಲಿಗೆ ಹಣ ಕಳುಹಿಸಬೇಕೆಂದು ಕೋರುತ್ತೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.