>ಬೆಂಗಳೂರಿನ ಅನೇಕ ಕಡೆ ಬಿ.ಎಂ.ಟಿ.ಸಿ. ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಅನುಕೂಲವಾಗುವಂತೆ ಗ್ರಾನೈಟ್ ಆಸನಗಳನ್ನು ಹಾಕಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ಆಸನಗಳು ಒಂದೊಂದಾಗಿ ಮಾಯವಾಗ ತೊಡಗಿದ್ದು ನಿಲ್ದಾಣಗಳಲ್ಲಿ ಬಸ್‌ಗಾಗಿ ಕಾಯುವವರು ಆಸನಗಳಿಗೆ ಆಧಾರವಾಗಿದ್ದ ಕಬ್ಬಿಣದ ರಾಡುಗಳ ಮೇಲೆ ಸರ್ಕಸ್ ಮಾಡುತ್ತ ಕುಳಿತುಕೊಳ್ಳಬೇಕಾಗಿದೆ. ಅಥವಾ ನಿಂತುಕೊಂಡೇ ಇರಬೇಕಾಗಿದೆ.
ಅಲ್ಲಿ ಆಸನಗಳನ್ನು ಹಾಕಿದ್ದವರಿಗೆ ಅವುಗಳ ರಕ್ಷಣೆಯ ಬಗೆಗೆ ಕಾಳಜಿ ಇಲ್ಲವೇ? ಆಸನಗಳು ಮಾಯವಾಗುತ್ತಿರುವ ಹಿಂದೆ ಕಳ್ಳರ ವ್ಯವಸ್ಥಿತ ಜಾಲವೇ ಇರಬಹುದೆನ್ನುವ ಅನುಮಾನ ಅವರಿಗೆ ಬಂದಿಲ್ಲವೇ? ಒಟ್ಟಿನಲ್ಲಿ ಆಸನಗಳ್ಳರನ್ನು ಪತ್ತೆ ಹಚ್ಚಿ ಶಿಕ್ಷಿಸುವುದರ ಜೊತೆಗೆ ನಿಲ್ದಾಣಗಳಲ್ಲಿ ಮತ್ತೆ ಆಸನಗಳನ್ನು ಹಾಕಬೇಕಾಗಿ ಸಂಬಂಧಿಸಿದವರಲ್ಲಿ ವಿನಂತಿ.
- ಬೈರಹೊಂಗಲ ರಾಮೇಗೌಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.