ADVERTISEMENT

ಆಸ್ತಿ ಲೋಕಾಯುಕ್ತಕ್ಕೆ ಸೇರಲಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ಕರ್ನಾಟಕ ಲೋಕಾಯುಕ್ತ ಸಂಸ್ಥೆ ಭ್ರಷ್ಟರಾದ ಸರ್ಕಾರಿ ಅಧಿಕಾರಿಗಳು, ನೌಕರರು ಮತ್ತು ಕೆಲವು ರಾಜಕಾರಣಿಗಳ ಮನೆಗಳ ಮೇಲೆ ದಾಳಿ ಮಾಡಿ ಅಕ್ರಮವಾಗಿ ಗಳಿಸಿದ್ದ ಸ್ಥಿರಾಸ್ತಿ ದಾಖಲೆಗಳನ್ನು ತನ್ನ ವಶಕ್ಕೆ ಪಡೆದುಕೊಂಡ ಬಗ್ಗೆ  ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಆಗಾಗ ವರದಿಗಳು ಪ್ರಕಟವಾಗುತ್ತವೆ.

ತನಿಖಾ ವೇಳೆಯಲ್ಲಿ ವಶಪಡಿಸಿಕೊಂಡಂತಹ ಸ್ಥಿರಾಸ್ತಿಗಳ ದಾಖಲೆಗಳು ಲೋಕಾಯುಕ್ತ ಸಂಸ್ಥೆಯ ಅಧೀನದಲ್ಲಿದ್ದರೂ ಅದರ ಒಡೆತನ ಆಸ್ತಿಯ ಮಾಲೀಕರ ಬಳಿ ಇರುತ್ತದೆ. ಅವರು ಈ ಆಸ್ತಿಗಳನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಸ್ಥಿರಾಸ್ತಿಗಳ ದಾಖಲೆಯನ್ನು ಲೋಕಾಯುಕ್ತ ಸಂಸ್ಥೆ ತನ್ನ ವಶಕ್ಕೆ ಪಡೆದರೆ ಸಾಲದು. ಅವನ್ನು ಸಂಸ್ಥೆಯ ಹೆಸರಿಗೆ ನೋಂದಣಿ ಮಾಡಿಕೊಳ್ಳಬೇಕು. ಋಣಭಾರ ಪತ್ರದಲ್ಲಿ ಸ್ಥಿರಾಸ್ತಿಗಳು ಲೋಕಾಯುಕ್ತ ವ್ಯಾಪ್ತಿಯಲ್ಲಿವೆ ಎಂದು ನಮೂದಾಗುವಂತೆ ನೋಡಿಕೊಳ್ಳಬೇಕು.
 
ಈ ಆಸ್ತಿಗಳಿಂದ ಬರುವ ಆದಾಯವನ್ನು ಸಂಸ್ಥೆ ತನ್ನ ವಶಕ್ಕೆ ಪಡೆಯಬೇಕು. ಹೀಗೆ ಮಾಡುವುದರಿಂದ ಸ್ಥಿರಾಸ್ತಿಗಳ ಮೇಲೆ ಮಾಲೀಕರ ಹಿಡಿತ ತಪ್ಪುತ್ತದೆ. ಅದೇ ಅವರಿಗೆ ನೀಡಬಹುದಾದ ಶಿಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.