
ಮಹಿಳಾ ದಿನಾಚರಣೆಯ ಅಂಗವಾಗಿ ಸಂಗತದಲ್ಲಿ ಬಂದ ‘ಗಂಡಾದರೆ ದೊರೆ, ಹೆಣ್ಣಾದರೆ ಹೊರೆ; ಹೀಗೇಕೆ’ ಲೇಖನಕ್ಕೆ ನಮ್ಮ ಪ್ರತಿಕ್ರಿಯೆ ಇದು.
ಪ್ರಾಚೀನ ಪರಂಪರೆಯಿಂದ ಇಂದಿನ ವರೆಗೆ ಧಾರ್ಮಿಕ ಮುಖಂಡತ್ವವನ್ನು ನಿರ್ವ ಹಿಸುತ್ತಿರುವ ಮಠ ಮಾನ್ಯಗಳು ಮತ್ತು ಇತರ ಧರ್ಮಗಳ ಧಾರ್ಮಿಕ ಮುಖಂಡರುಗಳು, ಲಿಂಗ ಸಮಾನತೆ ಮತ್ತು ಲಿಂಗಾನುಪಾತದ ಬಗ್ಗೆ ಕಳಕಳಿಯ ಮಾತುಗಳನ್ನಾಡುತ್ತಲೇ ಬಂದಿದ್ದಾರೆ. ಆದರೆ ಮಹಿಳೆಯರಿಗೆ ಮಠ ಮಾನ್ಯಗಳಲ್ಲಿ ಕೊಟ್ಟ ಸ್ಥಾನದ ಬಗ್ಗೆ ಆತ್ಮಾವಲೋಕನವೂ ಅಗತ್ಯ. ಈಗಲಾದರೂ ತಮ್ಮ ತಮ್ಮ ಮಠಗಳಿಗೆ ಮುಂದಿನ ಉತ್ತರಾಧಿಕಾರಿಯನ್ನಾಗಿ ಮಹಿಳೆ ಯರನ್ನು ನೇಮಕ ಮಾಡಿಕೊಂಡು ದೇಶದ ಸಂವಿಧಾನದ ೧೪ ಮತ್ತು ೧೬ನೇ ವಿಧಿ ಯನ್ನು ಎತ್ತಿ ಹಿಡಿಯಬಹುದಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.