ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅಧಿಕಾರಾವಧಿಯಲ್ಲಿನ ಸರ್ಕಾರಿ ಬಂಗಲೆಯಲ್ಲಿ 31 ಹವಾ ನಿಯಂತ್ರಕಗಳು, 25 ಹೀಟರ್‌ಗಳಿದ್ದವೆಂದು ತಿಳಿದು ಬಂದಿದೆ! (ಪ್ರ. ವಾ. ಜುಲೈ 4).
ಇವರು ಪ್ರಜಾ ಸೇವಕರು, ಇಲ್ಲಿ ಪ್ರಜೆಗಳೇ ಪ್ರಭುಗಳು, ಇದು ಪ್ರಜಾಪ್ರಭುತ್ವ! ಆದರೂ ನಮ್ಮಲ್ಲಿ ಪ್ರತಿ ವರ್ಷ ಬಿಸಿಲು, ಮಳೆ ,ಚಳಿ ಗಾಳಿ , ಹಸಿವೆ ಎಂದು ನೂರಾರು ‘ಪ್ರಭುಗಳು’ ನಿರಂತರ ಸಾಯುತ್ತಲೇ ಇದ್ದಾರೆ! ಪ್ರಭುವೇ ಸೇವಕರಾಗಿದ್ದರೂ, ಸೇವಕನೇ ಪ್ರಭುವಾಗಿ ಮೆರೆಯುತ್ತಿದ್ದರೂ ನಾವು ಕರೆಯುತ್ತೇವೆ ‘ಇದು ಪ್ರಜಾಪ್ರಭುತ್ವ’ ಎಂದು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.