‘ಹೆಣ್ಣು ಮಗುವಿಗೆ ಜನ್ಮ ನೀಡಿದರು ಎಂಬ ಕಾರಣಕ್ಕೆ ಈ ವರ್ಷ ಪಾಕಿಸ್ತಾನದಲ್ಲಿ 56 ಮಹಿಳೆಯರನ್ನು ಹತ್ಯೆ ಮಾಡಲಾಗಿದೆ!’ (ಪ್ರ.ವಾ. ನ.29). ನಾವು ಯಾವ ಶತಮಾನದಲ್ಲಿ ಬದುಕುತ್ತಿದ್ದೇವೆ? ‘ಶಿಶುವಿನ ಲಿಂಗ ನಿರ್ಧಾರದಲ್ಲಿ ತಾಯಿಯ ಪಾತ್ರ ಎಳ್ಳಷ್ಟೂ ಇಲ್ಲ’ ಎಂದು ವೈದ್ಯಕೀಯ ವಿಜ್ಞಾನ ಸಾರಿ ಸಾರಿ ಹೇಳಿಲ್ಲವೇ?
ಈ ಕೃತ್ಯ ಎಸಗುವವರು ಮನುಷ್ಯರೋ ಅಥವಾ ರಾಕ್ಷಸರೋ? ಇಂತಹ ಮನೋಭಾವದ ಕ್ರಿಮಿಗಳು ವಾಸಿಸುವ ಸಮಕಾಲದಲ್ಲಿ ಇತರೆ ದೇಶವಾಸಿಗಳು, ಸ್ವತಃ ಅಲ್ಲಿನ ಜನತೆ ನೆಮ್ಮದಿಯಿಂದಿರಲು ಸಾಧ್ಯವೇ? ವಿಶ್ವಸಂಸ್ಥೆಯಾಗಲೀ, ಜಾಗತಿಕ ನಾಯಕರಾಗಲೀ, ಇತರೆ ನಾಗರಿಕ ಪ್ರಪಂಚವಾಗಲೀ ಏನು ಮಾಡುತ್ತಿದೆ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.