ADVERTISEMENT

ಈ ಯೋಜನೆ ಜಾರಿಗೆ ಬರಲಿ...

ಉದಂತ ಶಿವಕುಮಾರ್‌, ಬೆಂಗಳೂರು
Published 23 ಡಿಸೆಂಬರ್ 2012, 19:59 IST
Last Updated 23 ಡಿಸೆಂಬರ್ 2012, 19:59 IST

ಮಹಾನಗರ ಪಾಲಿಕೆಗಳಲ್ಲಿ ವಾರ್ಡಿಗೊಂದು ಆಸ್ಪತ್ರೆ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕೆಂದು ನಿರ್ಧರಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೂರೊಂದು ನಮಸ್ಕಾರಗಳು. ನಗರಗಳಲ್ಲಿ ಇಂದಿಗೂ ಶೇ 60 ರಷ್ಟು ಜನರು ಮಧ್ಯಮ ಬಡವರಿದ್ದಾರೆ. ಕೂಲಿ ಮತ್ತು ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಜನರಿಗೆ ಇದರಿಂದ ಸಾಕಷ್ಟು ಅನುಕೂಲವಾಗುತ್ತದೆ.

ವಾರ್ಡ್‌ಗೊಂದು ಆಸ್ಪತ್ರೆ ಅನಿವಾರ್ಯವಾಗಿದೆ. ಆಸ್ಪತ್ರೆಗಳನ್ನು ನಿರ್ಮಾಣದ ನಂತರ ಅದರಲ್ಲಿ ಸಿಬ್ಬಂದಿ ಹಾಗೂ ಔಷಧಿಯ ಕೊರತೆ ಇರದಂತೆ ವ್ಯವಸ್ಥೆಯೂ ಇರಲಿ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಲ್ಲಿ ಎರಡನೇ ಹಂತದ ಸಾವಿರ ಕೋಟಿ ಅನುದಾನದಲ್ಲಿ ಶೇ 75 ರಷ್ಟು ಅನುದಾನ ಬಳಕೆ ಮಾಡಿಕೊಳ್ಳುವ ಗುರಿಯನ್ನು ಹೊಂದಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇಂತಹದೊಂದು ಯೋಜನೆಯ ಬಗ್ಗೆ ಚಿಂತಿಸಿರುವುದು ಒಳ್ಳೆಯದೇ ಆಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.