ADVERTISEMENT

ಈ ವ್ಯವಸ್ಥೆ ಧರ್ಮ ಸಮ್ಮತವೇ?

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 19:30 IST
Last Updated 13 ಅಕ್ಟೋಬರ್ 2011, 19:30 IST

ಪಂಕ್ತಿಭೇದ ಪ್ರಕರಣದ ಬಗೆಗೆ ಕುಂಜಾರುಗಿರಿ ದೇವಾಲಯದ ಅರ್ಚಕರು ಹರಕೆಯ ಊಟ ಎಂದು ನೀಡಿದ ಉತ್ತರಕ್ಕೆ ಪ್ರತಿಕ್ರಿಯೆ.

`ನಾವು ಸದ್ರಿ ಭೋಜನ ಶಾಲೆಯಲ್ಲಿ ಕುಳಿತಿದ್ದು ನಮ್ಮ ಸ್ವಂತ ಇಚ್ಚೆಯಿಂದ ಅಲ್ಲ, ದ್ವಾರ ಬಾಗಿಲ ಬಳಿಯಿದ್ದ ಕಾರ್ಯಕರ್ತರು ನಮ್ಮನ್ನು ಕರೆದು ಕುಳ್ಳಿರಿಸಿದ್ದು. ನಿಮ್ಮ ಹರಕೆ ಊಟದ ವಿಚಾರ ಹಿಂದೆ ಎಲ್ಲಿಯೂ ಹೇಳಿಲ್ಲ.  ನಮಗೆ ಬಡಿಸಿದ ಎಲೆಯಿಂದ ಊಟ ಆರಂಭಿಸುವ ಸಮಯದಲ್ಲಿ ಎಬ್ಬಿಸಿದ್ದು ಕೇವಲ ನಾವು ಗೌಡ ಸಾರಸ್ವತ ಬ್ರಾಹ್ಮಣರು ಎಂದಲ್ಲದೆ ಬೇರೆ ಕಾರಣ ನಮಗೆ ತಿಳಿಸಿಲ್ಲ. ನಾವು ಆಮಂತ್ರಣ ಇಲ್ಲದವರು ಎಂದೂ ಯಾರೂ ಆಗ ತಿಳಿಸಲಿಲ್ಲ~

`ಇಲ್ಲಿ ಉದ್ಭವಿಸುವ ಪ್ರಶ್ನೆ-ದೇವಾಲಯದಲ್ಲಿ ಸಾರ್ವಜನಿಕ ಭೋಜನಕ್ಕೆ ಪ್ರತ್ಯೇಕ ಆಮಂತ್ರಣ ಅವಶ್ಯವೇ? ಊಟ ಬಡಿಸಿದ ನಂತರ ಎಲೆಯಿಂದ ಎಬ್ಬಿಸುವುದು ಧರ್ಮ ಸಮ್ಮತವೇ? ಆದರೆ ದೇವಾಲಯದ ಅಧಿಕಾರಿಗಳು ನೀಡಿದ ಉತ್ತರ  ಊಟಕ್ಕೆ ಕೂತವರನ್ನು ಎಬ್ಬಿಸುವ ಹಕ್ಕು ಅವರಿಗಿದೆ. ಇದಕ್ಕೆ ಧರ್ಮದರ್ಶಿಗಳು ಪ್ರತಿಕ್ರಿಯಿಸುವರೆ?~

ADVERTISEMENT

`ಇನ್ನು ಮುಂದೆ ದೇವಾಲಯವನ್ನು ಸಂದರ್ಶಿಸುವ ಭಕ್ತಾದಿಗಳು ಅದರಲ್ಲೂ ವಿಶೇಷವಾಗಿ ಜಿ.ಎಸ್.ಬಿಗಳು ವಿಚಾರ ಮಾಡುವುದು ಒಳ್ಳೆಯದು. ನವರಾತ್ರಿಯಲ್ಲಿ ಕುಮಾರಿ ಪೂಜೆ ಮಾಡುವುದು ಶ್ರೇಷ್ಠ ವೈಶಿಷ್ಟತೆ ಆದರೆ ಇಲ್ಲಿ ಕುಮಾರಿಯ ಕೈಯಿಂದ ಪ್ರಸಾದವನ್ನು ಕಸಿದು ಹೊರಹಾಕಲಾಗಿದೆ.

ಈ ಘಟನೆ ದೇವಾಲಯದ ಪರಿಚಾರಕರ ಮನೋವೃತ್ತಿ ಸಂಸ್ಕಾರಗಳನ್ನು ಪ್ರತಿಬಿಂಬಿಸುವುದಿಲ್ಲವೆ?

ಸಮಾಜದಲ್ಲಿ ಅವರ ವರ್ಗ ಮಾತ್ರ ಪೂಜ್ಯ ಉಳಿದವರೆಲ್ಲ ನಗಣ್ಯವೆಂದು ಪರಿಗಣಿಸುವ ಈ ಸಂಸ್ಕೃತಿಯನ್ನು ಮಹಾಭಕ್ತಾದಿಗಳು ಒಪ್ಪಿ ಸಹಿಸುವರೆ ಇಲ್ಲವೆ ಪ್ರತಿಭಟಿಸಿ, ಖಂಡಿಸಿ ಈ ರೀತಿಯ ಜಾತೀಯತೆಯನ್ನು ಮೆಟ್ಟಿ ನಿಲ್ಲುವರೇ?~

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.