ದಾವಣಗೆರೆ ನಗರದ ದುರ್ಗಾಂಬಿಕಾ ಜಾತ್ರೆಯಲ್ಲಿ ಕಟ್ಟುನಿಟ್ಟಿನ ಕ್ರಮದ ನಡುವೆಯೂ, ಕೋಣನ ಬಲಿ ನಡೆದಿರುವುದು ವ್ಯಥೆಯ ಸಂಗತಿ. ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿ, ಪೊಲೀಸ್ ಬಂದೋಬಸ್ತ್‌ನೊಂದಿಗೆ ಇರುಳೆಲ್ಲ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.
ಒಂಬತ್ತು ಕಡೆ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿತ್ತು. ಇಂಥದರ ಮಧ್ಯೆಯೂ ಪ್ರಾಣಿ ಬಲಿ ನಡೆಯಿತು. ಇದರಲ್ಲಿ ದೇವಸ್ಥಾನದ ಆಡಳಿತ ಸಮಿತಿ ಪ್ರಮುಖರು, ಸ್ಥಳೀಯ ಪಟ್ಟಭದ್ರರು, ಪ್ರಭಾವಿ ರಾಜಕಾರಣಿಗಳ ಪ್ರೋತ್ಸಾಹವಿರುವುದು ಸ್ಪಷ್ಟ. ಇದು ದುಷ್ಟ ಶಕ್ತಿಗಳ ಮೇಲುಗೈ ಹಾಗೂ ಸರ್ಕಾರಿ ಆಡಳಿತ ಯಂತ್ರದ ದೌರ್ಬಲ್ಯದ ಸಂಕೇತ.
ಸಿ.ಸಿ. ಕ್ಯಾಮೆರಾಗಳ ಮೂಲಕ ಅಪರಾಧಿಗಳನ್ನು ಪತ್ತೆ ಹಚ್ಚಿ (ಇನ್ನು ಕೆಲವರನ್ನು ಪೊಲೀಸರ ನೆರವಿನಿಂದ ಪತ್ತೆಮಾಡಿ) ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕು. ಮುಂದಿನ ಸಲ ಜರುಗುವ ಜಾತ್ರೆಯ ಸಂದರ್ಭದಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರ ಮೀಸಲು ಪಡೆಯನ್ನು ನಿಯೋಜಿಸಬೇಕು.
ಪ್ರಾಣಿ ಬಲಿ ನಡೆದರೆ, ದೇವಸ್ಥಾನದ ಆಡಳಿತ ಸಮಿತಿಯವರನ್ನು, ಸ್ಥಳೀಯ ಶಾಸಕರನ್ನು ಶಿಕ್ಷೆಗೆ ಗುರಿಪಡಿಸುವಂತಾಗಬೇಕು. ಒಟ್ಟಾರೆ, ಕ್ರೂರ ಶಕ್ತಿಯನ್ನು ನಿಗ್ರಹಿಸಲು ಉಗ್ರಕ್ರಮ ಜರುಗಿಸುವ ಅಗತ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.