ADVERTISEMENT

ಉತ್ತರ ಕರ್ನಾಟಕಕ್ಕೆ ಅತಿಥಿ ಮುಖ್ಯಮಂತ್ರಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 6 ಮಾರ್ಚ್ 2014, 19:30 IST
Last Updated 6 ಮಾರ್ಚ್ 2014, 19:30 IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕಕ್ಕೆ ಒಂದು ರೀತಿಯಲ್ಲಿ ಅತಿಥಿ ಮುಖ್ಯಮಂತ್ರಿ ಎನಿಸಿದ್ದಾರೆ. ಏಕೆಂದರೆ ಅವರು ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಕಾಳಜಿಯನ್ನು ವಹಿಸುತ್ತಿಲ್ಲ. ಈ ಭಾಗದಲ್ಲಿ ನಡೆಯುವ ಬಹುತೇಕ ಔಪಚಾರಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ­ದ್ದನ್ನು ಬಿಟ್ಟರೆ  ಇಲ್ಲಿನ ಅಭಿವೃದ್ಧಿಗೆ ಆಸಕ್ತಿ ತೋರಿಸುತ್ತಿಲ್ಲ.

ಇದು ಒಟ್ಟಾರೆ ಸರ್ಕಾರದ ಮಲತಾಯಿ ಧೋರಣೆಯನ್ನು ತೋರಿಸುತ್ತದೆ. ಒಂದು ದೊಡ್ಡ ರಾಜ್ಯದ ಮುಖ್ಯಮಂತ್ರಿ­ಯಾ­ದವರು ಅಭಿವೃದ್ಧಿ ವಿಚಾರದಲ್ಲಿ ಸಮತೋಲನ ಸಾಧಿಸಬೇಕು. ಅವರು ಇನ್ನಾದರೂ ಬೆಂಗಳೂರು, ಮೈಸೂರು ಬಿಟ್ಟು ಹೊರಬರಬೇಕು. ಇದಕ್ಕಾಗಿಯೇ ಪಾಟೀಲ ಪುಟ್ಟಪ್ಪನವರು  ಎನ್.ಕೆ ಅಂದರೆ ನಾರ್ಥ್ ಕರ್ನಾಟಕ ಅಲ್ಲ ನೆಗ್ ಲೆಕ್ಟೆಡ್  ಕರ್ನಾಟಕ ಎಂದು ಹೇಳುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.