
ಜಯನಗರದ ಮಾಧವನ್ ಉದ್ಯಾನದ ಪೂರ್ವ ಭಾಗದ ಪ್ರವೇಶ ದ್ವಾರದ ಬಳಿ ಮರದ ಒಣ ಎಲೆಗಳ ರಾಶಿ ಬಿದ್ದಿದ್ದು, ಬಿಡಾಡಿ ದನಕರುಗಳ ವಾಸಸ್ಥಾನವಾಗಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಇನ್ನಾದರೂ ಅಧಿಕಾರಿಗಳು ಕ್ರಮಕೈಗೊಂಡು ಉದ್ಯಾನವನ್ನು ಸ್ವಚ್ಛವಾಗಿಡಲು ಮನವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.