ADVERTISEMENT

ಎರಡೂ ಕಡೆ ಪಂಪ ಪ್ರಶಸ್ತಿ ನೀಡಲಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 18:30 IST
Last Updated 13 ಫೆಬ್ರುವರಿ 2011, 18:30 IST

ಪಂಪ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಒಂದು ವರ್ಷ ಅಣ್ಣಿಗೇರಿಯಲ್ಲಿ ಮತ್ತೊಂದು ವರ್ಷ ಬನವಾಸಿಯಲ್ಲಿ ಮಾಡುವುದು ಸೂಕ್ತ  ವಾಗಿದೆ.  ಇದರಿಂದ ಕವಿಯ ಜನ್ಮಭೂಮಿಗೂ ಕರ್ಮಭೂಮಿಗೂ ಎರಡಕ್ಕೂ ಗೌರವ ಸಲ್ಲಿಸಿದಂತಾಗುತ್ತದೆ.

ಅಲ್ಲದೇ ಸಮಾರಂಭದ ಸಾಂಸ್ಕೃತಿಕ ಯಶಸ್ಸಿಗಾಗಿ ಎರಡೂ ಊರಿನ ಜನರಿಗೆ ಹಿತವಾದ ಸ್ಪರ್ಧೆಯ ಅವಕಾಶವನ್ನು   ಒದಗಿಸಿದಂತಾಗುತ್ತದೆ. ಹೀಗಾಗಿ ಈ ವರ್ಷ ಅಣ್ಣಿಗೇರಿಯಲ್ಲಿ ನಡೆಸಲಿ. ಮುಂದಿನ ವರ್ಷ ಬನವಾಸಿಯಲ್ಲಿ ನಡೆಯುವಂತಾಗಲಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.