ADVERTISEMENT

ಒಲಿಂಪಿಕ್ಸ್: ನೆಪ ಮಾತ್ರದ ಸಾಧನೆ ?

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2012, 19:30 IST
Last Updated 19 ಆಗಸ್ಟ್ 2012, 19:30 IST

ಒಲಿಂಪಿಕ್ಸ್‌ನಲ್ಲಿ ಪ್ರಮುಖ ಸ್ಪರ್ಧೆಯಾದ ಅಥ್ಲೆಟಿಕ್ಸ್‌ನಲ್ಲಿ ಶೂನ್ಯ ಸಾಧನೆ, ಕ್ರೀಡೆಯೆಂದು ಸುಲಭದಲ್ಲಿ ಒಪ್ಪಿಕೊಳ್ಳಲಾಗದ ಶೂಟಿಂಗ್‌ನಲ್ಲಿ ನೆಪಮಾತ್ರದ ಸಾಧನೆ, ಅಂತರರಾಷ್ಟ್ರೀಯ ಸಮುದಾಯ ಬೆರಗುಗಣ್ಣಿನಿಂದ ನೋಡುವ ಫುಟ್‌ಬಾಲ್ ಹಾಗೂ ಹಾಕಿಯಲ್ಲಿ ಕಳಪೆ
ಸಾಧನೆಗೆ ಹೆಸರಾದ ನಮ್ಮ ಓಲಿಂಪಿಕ್ಸ್ ತಂಡವನ್ನು ಹೊಗಳಿಕೊಳ್ಳುವುದೂ, ಅಲ್ಪ ತೃಪ್ತಿಯಿಂದ ಕಷ್ಟಪಟ್ಟು ತೇಗಿಕೊಳ್ಳುವುದೂ ಇನ್ನೂ ನಡೆದೇ ಇದೆ!

ಚಿನ್ನವಿಲ್ಲದ ಸಾಧನೆಯನ್ನು ಸಾಧನೆಯೆನ್ನಬಹುದೆ ?. ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಬದಲು ಕ್ರಿಕೆಟ್ ಆಡುತ್ತಲೋ, ನೋಡುತ್ತಲೋ ಸಂಭ್ರಮಿಸುವುದು ಒಳಿತಲ್ಲವೆ?
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.