ADVERTISEMENT

ಓದಲು ರಜೆ ನೀಡಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2012, 19:30 IST
Last Updated 8 ಜನವರಿ 2012, 19:30 IST

ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನಡೆಯುವ ಎಸ್.ಎಸ್.ಎಲ್.ಸಿ. ಪರೀಕ್ಷೆಗಳಿಗೆ ಓದಲು ವಿದ್ಯಾರ್ಥಿಗಳಿಗೆ 3-4 ವಾರಗಳ ರಜೆ ಕೊಡುವ ಪದ್ಧತಿ ಹಿಂದೆ ಇತ್ತು. ಆದರೆ ಈಗ ಈ ರಜೆಗಳು ರದ್ದಾಗಿವೆ. ಕೆಲವು ಶಾಲೆಗಳು ಹದಿನೈದು ದಿನಗಳ ಕಾಲ ರಜೆ ನೀಡಿದರೆ, ಕೆಲವು ಶಾಲೆಗಳು ಒಂದೆರಡು ದಿನ ರಜೆ ನೀಡುತ್ತವೆ. ಬಹುತೇಕ ಶಾಲೆಗಳಲ್ಲಿ ಪರೀಕ್ಷೆ ಆರಂಭವಾಗುವವರೆಗೂ ತರಗತಿಗಳು ನಡೆಯುತ್ತವೆ.

ಸಾಮಾನ್ಯವಾಗಿ ವಿದ್ಯಾರ್ಥಿಗಳು ಪರೀಕ್ಷೆಯ ಆತಂಕದಲ್ಲಿರುತ್ತಾರೆ. ಸಿದ್ಧತೆ ಮಾಡಿಕೊಳ್ಳಲು ಅರಿಗೆ ಹದಿನೈದು ದಿನಗಳ ಪರೀಕ್ಷೆ ಪೂರ್ವ ರಜೆ ಬೇಕಾಗುತ್ತದೆ. ಈ ವರ್ಷ ಪರೀಕ್ಷೆಗಳು ಏಪ್ರಿಲ್ 2 ರಿಂದ ಆರಂಭವಾಗುತ್ತವೆ. ವಿದ್ಯಾರ್ಥಿಗಳಿಗೆ ಎರಡು ವಾರ ರಜೆ ನೀಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.