ADVERTISEMENT

ಔಚಿತ್ಯಪೂರ್ಣ ಬರಹ

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 17:16 IST
Last Updated 17 ಜೂನ್ 2018, 17:16 IST

‘ಅಂಕೆಗೆ ಸಿಗದ ಅಶ್ವಮೇಧದ ಅಶ್ವ’ (ಪ್ರ.ವಾ., ಜೂನ್ 17) ಔಚಿತ್ಯಪೂರ್ಣ ಬರಹ. ಇತ್ತೀಚೆಗೆ ಫೇಸ್ ಬುಕ್, ವಾಟ್ಸ್ ಆ್ಯಪ್, ಟ್ವಿಟರ್‌ ಪುಟಗಳನ್ನು ತೆರೆಯುವುದೇ ಅಸಹ್ಯ ಮತ್ತು ಭಯ ಹುಟ್ಟಿಸುತ್ತಿದೆ.

ಮೂಲಭೂತವಾದಿಗಳು, ರಾಜಕೀಯ ಪಕ್ಷಗಳ ಅಂಧಾಭಿಮಾನಿಗಳು, ಜಾತಿವಾದಿಗಳು ಇಲ್ಲಸಲ್ಲದ ವಿಷಯಗಳನ್ನೆಲ್ಲ ಪೋಸ್ಟ್ ಮಾಡಿ ಯುವಕರ ‘ಬ್ರೇನ್‌ ವಾಶ್’ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಆ ಮೂಲಕ ಸಮಾಜದ ಸ್ವಾಸ್ಥ್ಯ ಕದಡುವ ಪ್ರಯತ್ನಗಳು ಸತತವಾಗಿ ನಡೆಯುತ್ತಿವೆ.

ಇಂಥವರ ಪಿತೂರಿಗೆ ಮುಗ್ಧರು ಬಲಿಯಾಗುತ್ತಿದ್ದು, ಇದನ್ನು ನಿಯಂತ್ರಿಸಬೇಕಾಗಿದೆ. ಇದು ಹೀಗೇ ಮುಂದುವರಿದರೆ ಮುಂದೊಮ್ಮೆ ಎಲ್ಲರೂ ಪಶ್ಚಾತ್ತಾಪ ಪಡಬೇಕಾಗಬಹುದು.
-ಬಸವರಾಜ ಕುಂಬಾರ, ಹೆಬ್ಬಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.