ADVERTISEMENT

ಕಕ್ಷಿದಾರರ ಅರಣ್ಯರೋದನ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

ಇತ್ತೀಚಿನ ವರ್ಷಗಳಲ್ಲಿ ನಮ್ಮ ನ್ಯಾಯಾಲಯಗಳು ಸುಸೂತ್ರವಾಗಿ ಕೆಲಸ ನಿರ್ವಹಿಸಲು ಅನೇಕ ಅಡಚಣೆಗಳು ಆಗುತ್ತಿವೆ. ಇದರಿಂದ ನಿಜವಾಗಿಯೂ  ತೊಂದರೆ ಆಗುವುದು ಕಕ್ಷಿದಾರರಿಗೆ. ಅವರ ಬವಣೆಗಳನ್ನು ಕೇಳುವವರೇ ಇಲ್ಲ.

ಕೆಲವು ವರ್ಷಗಳ ಹಿಂದೆ ನ್ಯಾಯಾಂಗ ವ್ಯವಸ್ಥೆ ಅತ್ಯಂತ ಚುರುಕಾಗಿ ಕಾರ್ಯ ನಿರ್ವಹಣೆ ಮಾಡಿದ ಸಾವಿರಾರು ಉದಾಹರಣೆಗಳಿವೆ. ಈಗ ಅದು ಚುರುಕಾಗಿಲ್ಲ. ಕಕ್ಷಿದಾರರು ತಮ್ಮ ಬವಣೆಗಳನ್ನು ನ್ಯಾಯಾಂಗದ ಗಮನ ತರಲು ಅವಕಾಶಗಳಿಲ್ಲ.

ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯಗಳಿಗೆ ಹೋಗಿ ವಿವಾದ ಬಗೆಹರಿಸಿಕೊಳ್ಳುವುದು ಬಹು ಕಷ್ಟವಾಗಿದೆ. ಕೆಲವೇ ತಿಂಗಳಲ್ಲಿ ಬಗೆಹರಿಸಬಹುದಾದ ಪ್ರಕರಣಗಳು ಏಳೆಂಟು ವರ್ಷಗಳಾದರೂ ಇತ್ಯರ್ಥವಾಗುತ್ತಿಲ್ಲ.
 
ಈ ಬೆಳವಣಿಗೆಯನ್ನು  ನ್ಯಾಯಾಂಗದ ಹಿರಿಯರು ಮತ್ತು ಸರ್ಕಾರ ಗಂಭೀರವಾಗಿ ಪರಿಗಣಿಸಿ ವಿವಾದಗಳ ಶೀಘ್ರ ಇತ್ಯರ್ಥಕ್ಕೆ ಕ್ರಮ ತೆಗೆದುಕೊಳ್ಳಬೇಕೆಂದು ಕಕ್ಷಿದಾರರ ಪರವಾಗಿ ವಿನಂತಿಸುತ್ತೇನೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.