ADVERTISEMENT

ಕಟುಕರ ಕೃತ್ಯ

ಡಾ.ಮುಮ್ತಾಜ್‌ ಅಲಿ ಖಾನ್ ಬೆಂಗಳೂರು
Published 2 ಮೇ 2013, 19:59 IST
Last Updated 2 ಮೇ 2013, 19:59 IST

ಪಾಕಿಸ್ತಾನ ಎಂದರೆ ಬೆಚ್ಚಿ ಬೀಳುವ ವಾತಾವರಣ ಕಂಡು ಬರುತ್ತಿದೆ. ಅದನ್ನು ಸೃಷ್ಟಿಸಿದ ಖ್ಯಾತಿ ಮೊಹಮ್ಮದ್ ಅಲಿ ಜಿನ್ನಾ ಅವರದು. ಪಾಕಿಸ್ತಾನದಲ್ಲಿ  ಎಂದೆಂದಿಗೂ ಶಾಂತಿ, ಸಹನೆ, ಸೌಹಾರ್ದ, ಸಾಮಾಜಿಕ ನ್ಯಾಯ ಒಂದು ಮರೀಚಿಕೆ ಇದ್ದ ಹಾಗೆ. ಸರಬ್ಜಿತ್ ಸಿಂಗ್‌ರವರ ಸಾವು ಪಾಕಿಸ್ತಾನದಲ್ಲಿರುವ ಜಿನ್ನಾ ಆಸ್ಪತ್ರೆಯಲ್ಲೇ  ಆಯಿತು.

ಇವರು ತಪ್ಪು ಮಾಡಿರಬಹುದು. ಆದರೆ ಎಷ್ಟು ವರ್ಷ ಇವರನ್ನು ಕಾರಾಗೃಹದಲ್ಲಿಟ್ಟು ಚಿತ್ರಹಿಂಸೆಯನ್ನು ಕೊಟ್ಟಿತು ಪಾಕಿಸ್ತಾನದ ಸರ್ಕಾರ. ಪಾಕಿಸ್ತಾನದ ಜೈಲಿನಲ್ಲಿ ಇವರನ್ನು ಇತರ ಉಗ್ರ ಅಪರಾಧಿಗಳ ಜೊತೆಯಲ್ಲಿಟ್ಟರು. ಸರ್ಕಾರಕ್ಕೆ ಗೊತ್ತಿರಲಿಲ್ಲವೇ ಸರಬ್ಜಿತ್ ಸಿಂಗ್ ಭಾರತದವರು ಮತ್ತು ಇತರರು ಪಾಕಿಸ್ತಾನದವರು. ಈ ಕೈದಿಗಳಲ್ಲಿ ಸಾಮರಸ್ಯ, ಅನುಕಂಪ ಬರಲು ಸಾಧ್ಯವೇ ಇಲ್ಲ.

ಸರಬ್ಜಿತ್‌ಸಿಂಗ್ ಅವರನ್ನು ಜೀವಂತವಾಗಿ ಭಾರತಕ್ಕೆ ಕಳುಹಿಸಿ ಕೊಟ್ಟಿದ್ದರೆ ಪಾಕಿಸ್ತಾನ ಸರ್ಕಾರದ ಬಗ್ಗೆ ಸ್ವಲ್ಪ ಅಭಿಮಾನ ಉಳಿಯಬಹುದಾಗಿತ್ತು. ಆದರೆ ನೀಚ ಸಂಸ್ಕೃತಿಯಿಂದ ವರ್ತಿಸುವ ಪಾಕಿಸ್ತಾನದ ಮಂತ್ರಿಗಳು, ರಾಜಕೀಯ ಧುರೀಣರು ಕಟುಕರಾಗಿಯೇ ಉಳಿದರು.

ಈಗ ಇನ್ನೊಂದು ಪ್ರಮುಖ ವಿಷಯವೇನೆಂದರೆ ಜೈಲಿನಲ್ಲಿ  ಸರಬ್ಜಿತ್ ಸಿಂಗ್‌ರವರ ಮೇಲೆ ಗಂಭೀರವಾದ ಹಲ್ಲೆ ನಡೆಸಿ ಅವರ ಮರಣಕ್ಕೆ ಪಾತ್ರರಾದ ಕೈದಿಗಳನ್ನು ಕೂಡಲೆ ಗಲ್ಲಿಗೇರಿಸಬೇಕು.

ನಿಜವಾಗಿಯೂ ಸರ್ಕಾರ ಹೀಗೆ ಮಾಡುವುದೇ? ಸರಬ್ಜಿತ್‌ಸಿಂಗ್‌ರವರು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರಂತೆ ಭಾರತದ ಕೋಟ್ಯಂತರ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆ ಯೂರುವುದಂತೂ ಖಚಿತ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.