
ಪ್ರಜಾವಾಣಿ ವಾರ್ತೆನಾನು ಬೆಂಗಳೂರಿನ ಅನೇಕ ಅಂಗಡಿ, ಮಾಲ್‌ಗಳಿಗೆ ಹೋದಾಗಲೆಲ್ಲ ಅಲ್ಲಿ ಕನ್ನಡೇತರ ಭಾಷೆಗಳ ಹಾಡುಗಳನ್ನು ಕೇಳುತ್ತಿದ್ದೇನೆ. ಕನ್ನಡ ಹಾಡುಗಳನ್ನು ಹಾಕುವುದಿಲ್ಲವೇಕೆ ಎಂದು ಕೇಳಿದರೆ ಕನ್ನಡ ಹಾಡುಗಳ ಮುದ್ರಿಕೆಗಳು (ಟೇಪ್, ಸಿ.ಡಿ) ಇಲ್ಲ ಎಂದೋ, ನಮ್ಮ ನಿಯಮದ ಪ್ರಕಾರ ಕನ್ನಡ ಹಾಡು ಹಾಕುವಂತಿಲ್ಲ ಎಂಬ ಉತ್ತರ ನೀಡುತ್ತಾರೆ.
ಕರ್ನಾಟಕದ ರಾಜಧಾನಿಯಲ್ಲಿ ಕನ್ನಡ ಹಾಡುಗಳನ್ನು ಹಾಕದಿರುವುದು ಯಾವ ನಿಯಮ? ಮಾಲ್‌ಗಳಲ್ಲಿ ಕನ್ನಡ ಹಾಡು ಕೇಳಬಾರದೆಂಬ ನಿಯಮ ಎಲ್ಲಿದೆ?
ನನ್ನ ವಿನಂತಿ ಏನೆಂದರೆ ಅಂಗಡಿ ಮಳಿಗೆಗಳಿಗೆ ಹೋಗುವ ಕನ್ನಡಿಗರು ಕನ್ನಡ ಹಾಡುಗಳನ್ನೇ ಹಾಕುವಂತೆ ಒತ್ತಾಯಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.