ADVERTISEMENT

ಕಪಿಲಾ ನದಿಯಲ್ಲಿ ಮಾಲಿನ್ಯ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 19:30 IST
Last Updated 3 ಏಪ್ರಿಲ್ 2012, 19:30 IST

ನಂಜನಗೂಡು ಕಪಿಲಾ ನದಿ ದಂಡೆಯ ಮೇಲಿರುವ ಶ್ರೀಕಂಠೇಶ್ವರ ದೇವಾಲಯದ ಆದಾಯ ಪ್ರತಿ ತಿಂಗಳು 50 ಲಕ್ಷಕ್ಕೂ ಮಿಗಿಲಂತೆ. ದುರ್ದೈವವೆಂದರೆ ಪ್ರತಿ ನಿತ್ಯ ಸಾವಿರಾರು ಮಂದಿ ಕಪಿಲಾ ನದಿಯಲ್ಲಿ ಮಿಂದು, ಕಸ, ಕಡ್ಡಿ, ಹಳೆ ಬಟ್ಟೆಗಳನ್ನು ನೀರಿಗೆ ಎಸೆದು ನದಿ ತುಂಬೆಲ್ಲಾ ಕಸದ ರಾಶಿಯೇ ಕಾಣುತ್ತಿದೆ.

ಇದನ್ನು ಸ್ವಚ್ಛ ಮಾಡಲು ಹಣವಿಲ್ಲವಂತೆ. ನದಿಯ ದುರ್ನಾತವನ್ನು ಗಮನಿಸಿದ ಹುಣಸೂರಿನ ಸ್ವಯಂ ಸೇವಾ ಸಂಸ್ಥೆಯೊಂದು ತನ್ನ ನೂರಾರು ಮಂದಿ ಸದಸ್ಯರೊಡನೆ ನದಿಗೆ ಇಳಿದು ಸ್ವಚ್ಛ ಮಾಡಿ ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದೆ.

ಅಂದರೆ, ದೇವಾಲಯಕ್ಕೆ ಹರಿದು ಬರುತ್ತಿರುವ ಲಕ್ಷಾಂತರ ರೂಪಾಯಿ ಏನಾಗುತ್ತಿದೆ? ನದಿಯ ದಂಡೆಯುದ್ದಕ್ಕೂ ಮಲ - ಮೂತ್ರ ವಿಸರ್ಜನೆ ಬಯಲಿನಲ್ಲಿಯೇ ನೆರವೇರುತ್ತಿರುತ್ತದೆ. ಇದೆಲ್ಲವೂ ನದಿಗೆ ಹರಿದು ರೋಗ ರುಜಿನಗಳಿಗೆ ಕಾರಣವಾಗಲಾರದೇ? ನದಿಯಲ್ಲಿ ಮಿಂದವರು ಮೈ ಪರಚಿಕೊಳ್ಳುವಂತಾಗಿದೆ. ಈ ಅಸಹ್ಯಕರ ಸ್ಥಿತಿಯನ್ನು ಮುಜರಾಯಿ ಇಲಾಖೆ ಗಮನಿಸಬಾರದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.