ADVERTISEMENT

ಕರ್ನಾಟಕ ಲೆಕ್ಕಕ್ಕಿಲ್ಲವೇ?

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 19:30 IST
Last Updated 1 ಅಕ್ಟೋಬರ್ 2017, 19:30 IST

ದಹಲಿಯಲ್ಲಿ ಕರ್ನಾಟಕಕ್ಕೆ ಧ್ವನಿ ಇಲ್ಲ ಮತ್ತು ಕರ್ನಾಟಕ ಲೆಕ್ಕಕ್ಕಿಲ್ಲ ಎನ್ನುವ ಆರೋಪ ಲಾಗಾಯ್ತಿನಿಂದ ಇದೆ. ಹೊಸ ರಾಜ್ಯಪಾಲರ ನೇಮಕದ ಪಟ್ಟಿಯಿಂದ ಈ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ.

ಕೇಂದ್ರ ಸರ್ಕಾರಕ್ಕೆ ಹಿಂದಿ ಹೇರುವ ವಿಚಾರದಲ್ಲಿ ಮಾತ್ರ ಕರ್ನಾಟಕ ನೆನಪಾಗುತ್ತದೆ ಎನ್ನುವ ಮಾತು ಈಗ ದೃಢಪಟ್ಟಿದೆ.‌ ಕೇಂದ್ರ ಸರ್ಕಾರದ ವಿವಿಧ ಸಮಿತಿ, ಆಯೋಗಗಳಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ ಸಿಗುತ್ತಿಲ್ಲ. ಕೇಂದ್ರ ಸಚಿವ ಸಂಪುಟದಲ್ಲೂ ಮಹತ್ವದ ಖಾತೆಗಳು ಕರ್ನಾಟಕದವರಿಗೆ ಲಭಿಸಿಲ್ಲ. ರಾಜ್ಯಪಾಲರ ಸ್ಥಾನವೂ ಕರ್ನಾಟಕದವರಿಗೆ ಇಲ್ಲ... ರಾಜ್ಯ ಇಷ್ಟು ನಿರ್ಲಕ್ಷ್ಯಕ್ಕೆ ಒಳಗಾದರೂ ಕರ್ನಾಟಕದ ಬಿಜೆಪಿ ಧುರೀಣರು ಧ್ವನಿ ಎತ್ತುತ್ತಿಲ್ಲ. ಪಾಲಿಗೆ ಬಂದದ್ದೇ ಪಂಚಾಮೃತ ಎಂದು ಮೌನಕ್ಕೆ ಶರಣಾಗಿರುವುದು ಅಚ್ಚರಿ ಮೂಡಿಸಿದೆ.

–ರಮಾನಂದ ಶರ್ಮಾ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.