ADVERTISEMENT

ಕಲಾವಿದರಿಗೆ ಅನ್ಯಾಯ

​ಪ್ರಜಾವಾಣಿ ವಾರ್ತೆ
Published 5 ಜೂನ್ 2012, 19:30 IST
Last Updated 5 ಜೂನ್ 2012, 19:30 IST

ಕರ್ನಾಟಕ ಲಲಿತಕಲಾ ಅಕಾಡೆಮಿಗೆ  ಸರ್ಕಾರ 10 ಜನ ಸದಸ್ಯರನ್ನು  ನೇಮಿಸಿದೆ. ರಾಜ್ಯದಲ್ಲಿ 30 ಜಿಲ್ಲೆಗಳಿದ್ದು ಸದಸ್ಯರು ಮಾತ್ರ 10 ಜನ. (ಇವರಲ್ಲಿ 3-4 ಜನ ಮಾತ್ರ ನಿಜವಾದ ಕಲಾವಿದರು ಇವತ್ತಿಗೂ ಕಲಾಕೃತಿಗಳನ್ನು ರಚಿಸುವಂತಹವರು) ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ  ಹಲವಾರು ವರ್ಷಗಳಿಂದ ನೆಲೆನಿಂತ ಕಲಾವಿದರೇ ಐವರಿದ್ದಾರೆ.
 
ಸದಸ್ಯರು ಅವರ ಸ್ವಂತ ಜಿಲ್ಲೆಯಲ್ಲಿ ಜನಿಸಿದ್ದು ಬಿಟ್ಟರೆ ಅವರಿಗೆ ಊರಿನ ಜತೆ ಸಂಬಂಧ ಇಲ್ಲ, ಅಲ್ಲಿನ ಕಲಾವಿದರ ಜತೆ ಸಂಪರ್ಕ ಇಲ್ಲ ಹಾಗೂ ಅಲ್ಲಿನ ಕಲಾಚಟುವಟಿಕೆಗಳಲ್ಲಿ  ಪಾಲ್ಗೊಳ್ಳುವಿಕೆ ಇಲ್ಲ.

ಅಲ್ಲದೆ       ಕಳೆದಬಾರಿ ಇದ್ದ ಸದಸ್ಯರನ್ನೇ ಈ ಬಾರಿಯೂ ಸರಕಾರ ಆಯ್ಕೆಮಾಡಿರುವುದರ ಉದ್ದೇಶ ಅರ್ಥವಾಗುತ್ತಿಲ್ಲ. ಸದಸ್ಯರ ಆಯ್ಕೆಗೆ ಯಾವ ಮಾನದಂಡವಿದೆ? 
                                  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.