ADVERTISEMENT

ಕಲ್ಲು ಚಪ್ಪಡಿಯ ಫಜೀತಿ

ಬೆಳ್ಳಾವೆ ರಮೇಶ
Published 10 ಮಾರ್ಚ್ 2014, 19:30 IST
Last Updated 10 ಮಾರ್ಚ್ 2014, 19:30 IST

ಡಿ.ವಿ.ಜಿ. ರಸ್ತೆಯಿಂದ ಗಾಂಧಿಬಜಾರ್‌ ವೃತ್ತದವರೆಗೆ ರಸ್ತೆಯ ಪಾದಚಾರಿಗಳ ಮಾರ್ಗದಲ್ಲಿ ಎರಡೂ ಬದಿಗೆ ಕಲ್ಲು ಚಪ್ಪಡಿಗಳನ್ನು ಹಾಸಲಾಗಿದೆ.

ಈ ಕಲ್ಲು ಚಪ್ಪಡಿ ಮೇಲೆ ನಡೆದಾಡುವುದೇ ಸಾಹಸ! ತೂಕದ ವ್ಯಕ್ತಿಯಾದರೆ ಅವರ ಭಾರಕ್ಕೆ ಸೀದಾ ಮೋರಿಯಲ್ಲಿ ಬೀಳುವುದು ಗ್ಯಾರಂಟಿ. ಈ ಪಾದಚಾರಿ ಮಾರ್ಗದಲ್ಲಿ ನಡೆದಾಡಿದರೆ ಧಡ್‌ ಧಡ್‌ ಎಂಬ ಶಬ್ದ, ಯಾವಾಗ ಮುರಿದು ಬೀಳುತ್ತದೋ ಎಂಬ ಭಯ. ಹೀಗಾಗಿ ಪಾದಚಾರಿಗಳು ಪಾದಚಾರಿ ಮಾರ್ಗ ಬಿಟ್ಟು ರಸ್ತೆಯಲ್ಲೇ ಓಡಾಡುವಂತಾಗಿದೆ. ಬಸವನಗುಡಿ ಶಾಸಕರು ಈ ಬಗ್ಗೆ ಗಮನಹರಿಸುವರೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.