
ಪ್ರಜಾವಾಣಿ ವಾರ್ತೆಪ್ಯಾಲೇಸ್ ರಸ್ತೆ, ಕನ್ನಿಂಗ್ ಹ್ಯಾಮ್‌ರಸ್ತೆ, ಇನ್‌ಫೆಂಟ್ರಿ ರಸ್ತೆಯಿಂದ ಬಳ್ಳಾರಿ ರಸ್ತೆ ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವ ರಸ್ತೆಗಳಿಗೆಲ್ಲಾ ಅರಮನೆ ಅಡ್ಡರಸ್ತೆ ಸಂಪರ್ಕ ಕಲ್ಪಿಸುವುದರಿಂದ ಇದು ಪ್ರಮುಖ ರಸ್ತೆಯಾಗಿದೆ.
ಕೆಲವು ತಿಂಗಳ ಹಿಂದೆ ಈ ರಸ್ತೆಯನ್ನು ಉತ್ತಮವಾಗಿ ನಿರ್ವಹಿಸಲಾಗಿತ್ತು. ಆದರೆ ಈಗ ಅದು ಕಸದ ತೊಟ್ಟಿಯಾಗಿದೆ. ಅದರಲ್ಲೂ ಮೌಂಟ್ ಕಾರ್ಮೆಲ್ ಕಾಲೇಜು ಬಳಿಯ ಸ್ಥಳ ಹೀನಾಯ ಸ್ಥಿತಿ ತಲುಪಿದೆ.
ಈ ಕುರಿತು ಬಿಬಿಎಂಪಿಗೆ ಮಾಹಿತಿ ನೀಡಿದಾಗಲೆಲ್ಲ ಯಾರೋ ಬಂದು ಈ ಕಸಕ್ಕೆ ಬೆಂಕಿ ಹಾಕುತ್ತಾರೆ. ಈ ಬೆಂಕಿ ರಾತ್ರಿಯವರೆಗೆ ಹಾಗೇ ಉರಿಯುತ್ತಲೇ ಇರುತ್ತದೆ. ಈ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಪರಿಗಣಿಸಬೇಕು.
ಎಸ್.ಪ್ರಕಾಶ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.