ADVERTISEMENT

ಕಾಟಾಚಾರದ ಸಮಾಲೋಚನೆ ಬೇಡ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ಇತ್ತೀಚಿನ ದಿನಗಳಲ್ಲಿ ಲೋಕಾಯುಕ್ತ ಹಾಗೂ ಉಪಲೋಕಾಯುಕ್ತರ ನೇಮಕಾತಿ ಕಗ್ಗಂಟಾಗಿ ಪರಿಣಮಿಸಿದೆ. ನೇಮಕಾತಿಯಲ್ಲಿ ಭಾವನಾತ್ಮಕ ವಿಷಯಗಳು ಪ್ರಸ್ತಾಪವಾಗುತ್ತಿವೆ. ಈ ಬೆಳವಣಿಗೆ ದುರದೃಷ್ಟಕರ.
 
ನೇಮಕಾತಿ ನಂತರ ರಾಜೀನಾಮೆ ಕೊಡುವಂತಹ ಪರಿಸ್ಥಿತಿ ನಿರ್ಮಾಣ ಆಗಬಾರದು.
ಲೋಕಾಯುಕ್ತ ಹಾಗೂ ಉಪ ಲೋಕಾಯುಕ್ತರಿಗೆ ಸಂಬಂಧಿಸಿದಂತೆ ನಡೆದ ವಿದ್ಯಮಾನಗಳು ಸಾರ್ವಜನಿಕರ ಕಣ್ಣಲ್ಲಿ   ನಗೆಪಾಟಲಿಗೆ ಈಡಾಗಿವೆ.
 
ಈ ಹುದ್ದೆಗಳಿಗೆ ನೇಮಕಾತಿಗೆ ಅವರ ಅರ್ಹತೆಯೊಂದನ್ನೇ ಪರಿಗಣಿಸಬೇಕು. ಅರ್ಹರನ್ನು ಶಿಫಾರಸು ಮಾಡುವ ಮೊದಲು ಸರ್ಕಾರ ಸಂಬಂಧಪಟ್ಟವರ ಜತೆಯಲ್ಲಿ ಸಮಾಲೋಚನೆ ಮಾಡಬೇಕು.
 
ಒಂದು ಸಣ್ಣ ಲೋಪವಾದರೂ ಆಯ್ಕೆಯಾದವರಿಗೆ ಮುಜುಗರ ಉಂಟು ಮಾಡುತ್ತದೆ. ಹೀಗಾಗಿ ಇಡೀ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಮತ್ತು ನಿಯಮಗಳಿಗೆ ಬದ್ಧವಾಗಿರಬೇಕು.

ಲೋಕಾಯುಕ್ತ ಸಂಸ್ಥೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸಿ ಮಾದರಿಯನ್ನೇ ಸೃಷ್ಟಿಸಿದವರಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಉತ್ತರಾಧಿಕಾರಿಯನ್ನು ಆರಿಸುವಾಗ ಸರ್ಕಾರ ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಡಬೇಕು. ಅನರ್ಹರನ್ನು ಆಯ್ಕೆ ಮಾಡುವುದರಿಂದ ಸರ್ಕಾರದ ಗೌರವಕ್ಕೂ ಚ್ಯುತಿ ಬರುತ್ತದೆ. ಅದನ್ನು ಸರ್ಕಾರ ಅರ್ಥ  ಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.