ADVERTISEMENT

ಕಾಮಗಾರಿ ಇನ್ನೆಷ್ಟು ದಿನ?

ಎ.ವಿ.ಶಾಮರಾವ್‌
Published 18 ಫೆಬ್ರುವರಿ 2013, 19:59 IST
Last Updated 18 ಫೆಬ್ರುವರಿ 2013, 19:59 IST
ಟಾಟಾ ನಗರದ ಮುಖ್ಯರಸ್ತೆಯೊಂದು ದುಸ್ಥಿತಿಯಲ್ಲಿದೆ. ರಸ್ತೆ ಇದೇ ಸ್ಥಿತಿಯಲ್ಲಿದ್ದು ಹಲವಾರು ದಿನ ಕಳೆದಿದ್ದರೂ ರಿಪೇರಿ ಕೆಲಸ ಇನ್ನೂ ನಡೆದಿಲ್ಲ. ನಗರದಲ್ಲಿ ಹಲವೆಡೆ ಈ ರೀತಿಯ ರಸ್ತೆಗಳು ಸಾಕಷ್ಟು ಇದ್ದು ಸಂಬಂಧಪಟ್ಟವರು ಶೀಘ್ರ ಕ್ರಮ ಕೈಗೊಳ್ಳಬೇಕಿದೆ.
ಟಾಟಾ ನಗರದ ಮುಖ್ಯರಸ್ತೆಯೊಂದು ದುಸ್ಥಿತಿಯಲ್ಲಿದೆ. ರಸ್ತೆ ಇದೇ ಸ್ಥಿತಿಯಲ್ಲಿದ್ದು ಹಲವಾರು ದಿನ ಕಳೆದಿದ್ದರೂ ರಿಪೇರಿ ಕೆಲಸ ಇನ್ನೂ ನಡೆದಿಲ್ಲ. ನಗರದಲ್ಲಿ ಹಲವೆಡೆ ಈ ರೀತಿಯ ರಸ್ತೆಗಳು ಸಾಕಷ್ಟು ಇದ್ದು ಸಂಬಂಧಪಟ್ಟವರು ಶೀಘ್ರ ಕ್ರಮ ಕೈಗೊಳ್ಳಬೇಕಿದೆ.   

ರಾಮಮೂರ್ತಿನಗರಕ್ಕೆ ವಾರ್ಡ್ ನಂ. 25, 26 ಮತ್ತು 51 ಸೇರಿವೆ. ಈ 3 ವಾರ್ಡ್‌ಗಳಲ್ಲಿ ಕುಡಿಯುವ ನೀರು, ಹಾಗೂ 28 ಚರಂಡಿಯ ಕಾಮಗಾರಿ ಸುಮಾರು 60 ರಷ್ಟು ಮುಗಿದಿದೆ. ಬಾಕಿ ಉಳಿದಿರುವ ಕಾಮಗಾರಿಯನ್ನು ಜಲ ಮಂಡಳಿಯವರು ಆದಷ್ಟು ಬೇಗ ಮುಗಿಸಬೇಕಾಗಿ ವಿನಂತಿ.

ಜೊತೆಗೆ ಮುಖ್ಯವಾಗಿ ಕುಡಿಯುವ ನೀರಿನ ಕಾಮಗಾರಿ ಮುಗಿದಿರುವ ಕೆಲಕಡೆ ನೀರು ಬರುತ್ತದೆ, ಕೆಲಕಡೆ ಸೋರುತ್ತದೆ. ಅಲ್ಲದೆ ಎಲ್ಲೆಲ್ಲಿ ನೀರು ಬರುತ್ತದೆಯೋ ಆ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ.

ಇಲ್ಲಿನ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ನವೆಂಬರ್ ತಿಂಗಳಲ್ಲೇ (ರಾಜ್ಯೋತ್ಸವಕ್ಕೆ) ಕಾವೇರಿ ನೀರು ಹರಿಸುತ್ತೇವೆ ಎಂಬ ಆಶ್ವಾಸನೆ ಕೊಟ್ಟಿದ್ದರು. ಆದರೆ ಇದುವರೆಗೆ 25, 26 ಮತ್ತು 51ರ ವಾರ್ಡ್‌ಗಳಿಗೆ ಕುಡಿಯುವ ನೀರು ಬಂದೇ ಇಲ್ಲ.

ಈ ಪರಿಸ್ಥಿತಿಯನ್ನು ಜಲ ಮಂಡಳಿಯವರು ಈ ಯೋಜನೆಗಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಈ ಕಾಮಗಾರಿಗಳನ್ನು ಬೇಗ ಮುಗಿಸಿ, ಜನರಿಗೆ ಕುಡಿಯುವ ನೀರು ಆದಷ್ಟು ಬೇಗ ದೊರಕಿಸಿಕೊಡಬೇಕೆಂದು ಈ ಮೂಲಕ ನಮ್ಮ ಸಂಘದ ಆಗ್ರಹ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.