ADVERTISEMENT

ಕಾಳಜಿ ಶ್ಲಾಘನೀಯ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST

ಜೈನಮುನಿ ಜಂಗಲೇ ವಾಲಾ ಬಾಬಾ ‘ತಮ್ಮ ಬಳಿ ಬರುವ ಜನರಿಗೆ ಜಪಮಾಲೆಯ ಜತೆಗೆ ಸಸಿಯನ್ನೂ ಪ್ರಸಾದ ರೂಪವಾಗಿ ಕೊಡುತ್ತಾರೆ... ಹೀಗೆ ಅವರಿಂದ ಸದ್ದಿಲ್ಲದೆ ಪರಿಸರ ಸಂರಕ್ಷಣೆ ಕೆಲಸ ನಡೆದಿದೆ’ (ಪ್ರ.ವಾ., ಫೆ.21) ಎಂಬ ವರದಿ ಖುಷಿಕೊಟ್ಟಿತು. ಧಾರ್ಮಿಕ ಗುರುಗಳು ಸಹ ಈ ರೀತಿ ಪರಿಸರ ಸಂರಕ್ಷಣೆ ಮಾಡಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ.

ನಮ್ಮ ರಾಜ್ಯದಲ್ಲೂ ಸ್ವಾಮೀಜಿ, ಬಾಬಾ, ಪಾದ್ರಿ, ಜ್ಯೋತಿಷಿಗಳಿಗೆ ಬರವಿಲ್ಲ. ಇವರೆಲ್ಲರೂ ಈ ನಿಟ್ಟಿನಲ್ಲಿ ಯೋಚಿಸಿ ಭಕ್ತರಿಗೆ ಗಿಡಕೊಟ್ಟು ಪರಿಸರ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡರೆ ನಮ್ಮ ಕಾಡು ಮತ್ತಷ್ಟು ವಿಸ್ತರಿಸಿ ಪರಿಸರದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಬಹುದಲ್ಲವೇ?

ಚಿದಾನಂದ್, ಹುಳಿಯಾರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.