ಸರ್ಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಹುದ್ದೆಗೆ ಕೆ.ಪಿ.ಎಸ್.ಸಿ 629 ಮುಖ್ಯ ಶಿಕ್ಷಕರ ನೇಮಕಾತಿಗಾಗಿ 2007 ನವೆಂಬರ್‌ನಲ್ಲಿ ಅರ್ಜಿ ಆಹ್ವಾನಿಸಿ ಫೆಬ್ರುವರಿ 2008 ರಂದು ಕೆ.ಎ.ಎಸ್ ಮಾದರಿಯಲ್ಲಿ ಪೂರ್ವಭಾವಿ ಪರೀಕ್ಷೆ ಹಾಗೂ ಡಿಸೆಂಬರ್ 2008 ರಲ್ಲಿ ಮುಖ್ಯ ಪರೀಕ್ಷೆ ನಡೆಸಿ ತಾತ್ಕಾಲಿಕ ಮತ್ತು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದೆ.
ಕೆ.ಪಿ.ಎಸ್.ಸಿ ಅರ್ಜಿ ಆಹ್ವಾನಿಸಿ ಮೂರೂವರೆ ವರ್ಷಗಳಾದರೂ ಈ ಕೆ.ಇ.ಎಸ್. ನೇಮಕಾತಿ ಆಯ್ಕೆ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಕಳುಹಿಸಿರುವುದಿಲ್ಲ. ಒಂದೊಂದು ನೇಮಕಾತಿ ಪೂರ್ಣಗೊಳ್ಳಲು 3, 4, 5 ವರ್ಷಗಳ ಅಗತ್ಯವಿದೆಯೇ?
ಕೆ.ಇ.ಎಸ್ ನೇಮಕಾತಿಯ ಪ್ರಕ್ರಿಯೆಯನ್ನು ಕೆ.ಪಿ.ಎಸ್.ಸಿ. ಕೇಂದ್ರದ ಯು.ಪಿ.ಎಸ್.ಸಿ ಮಾದರಿಯಲ್ಲಿ ನಿಗದಿತ ಕಾಲಮಿತಿಯೊಳಗೆ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲವೇಕೆ? ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು, ಸಂಬಂಧಪಟ್ಟ ಅಧಿಕಾರಿಗಳು, ಕೆ.ಇ.ಎಸ್ ನೇಮಕಾತಿಯನ್ನು ವಿಳಂಬ ನೀತಿಯನ್ನು ನಿಲ್ಲಿಸಿ, ನೇಮಕಾತಿಯನ್ನು ಚುರುಕುಗೊಳಿಸಿ ನೇಮಕಾತಿ ಆದೇಶ ಪತ್ರಗಳನ್ನು ಆದಷ್ಟು ಬೇಗ ನಿರುದ್ಯೋಗಿಗಳಿಗೆ ವಿತರಿಸಲು ಕೆ.ಪಿ.ಎಸ್.ಸಿ ಮತ್ತು ಸಾ. ಶಿ. ಇಲಾಖೆಗೆ ಸೂಚಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.