ADVERTISEMENT

ಕೆಪಿಎಸ್‌ಸಿ ಅರ್ಜಿ ಅವಾಂತರ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 19:30 IST
Last Updated 20 ಮಾರ್ಚ್ 2011, 19:30 IST

ಪ್ರಥಮ ಮತ್ತು ದ್ದಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಕೆಪಿಎಸ್‌ಸಿ ಆನ್‌ಲೈನ್ ಅರ್ಜಿ ಆಹ್ವಾನಿಸಿದ್ದು, ಅರ್ಜಿಸಲ್ಲಿಕೆ ಪ್ರಕ್ರಿಯೆಯಲ್ಲಿ ಹೊಸ ಮಾರ್ಪಾಡುಗಳನ್ನು ಈ ಬಾರಿ ಜಾರಿಗೆ ತಂದಿದೆ. ಈ ಮಾರ್ಪಾಡುಗಳು ಹಲವಾರು ಅವಾಂತರಗಳಿಗೆ ಎಡೆಮಾಡಿಕೊಟ್ಟಿದೆ.

ಈ ಮಾರ್ಪಾಡಿನಲ್ಲಿ ಮೊದಲು ಬ್ಯಾಂಕ್ ಚಲನ್ ಮುದ್ರಣಕ್ಕೆ ಲಭ್ಯವಿದ್ದು ಶುಲ್ಕ ಪಾವತಿಸಿದ ನಂತರವಷ್ಟೇ ಅರ್ಜಿ ಪ್ರತಿ ಮುದ್ರಣಕ್ಕೆ ದೊರೆಯುತ್ತದೆ. ಕಿಕ್ಕಿರಿದು ತುಂಬಿದ ಅಂತರ್ಜಾಲ ಕೇಂದ್ರ ಮತ್ತು ಲವಾರು ತಾಂತ್ರಿಕ ತೊದರೆಗಳಿಂದ ಅರ್ಜಿ ಭರ್ತಿ ಮಾಡುವಾಗ ಆಗಿರುವ  ಲೋಪದೋಷಗಳು ಅರ್ಜಿ ಪ್ರತಿ ಪಡೆದ ನಂತರವಷ್ಟೇ ತಿಳಿಯುತ್ತದೆ. ಆ ಸಮಯಕ್ಕಾಗಲೇ ಎಲ್ಲಾ  ಕೈ ಮೀರಿಹೋಗಿರುತ್ತದೆ.

ಇಂತಹ ತಪ್ಪುಗಳು ತಂದೆ- ತಾಯಿಯ ಹೆಸರು, ಗಳಿಸಿದ ಅಂಕ ಭರ್ತಿಮಾಡುವಾಗ ಅಷ್ಟೇ ಅಲ್ಲದೆ ಪತ್ರಿಕೆ-2ರ ಆಯ್ಕೆಯಲ್ಲೂ  ಸಂಭವಿಸಿದೆ. ಸಹಾಯವಾಣಿಗಳು ಸದಾ ಕಾರ್ಯನಿರತವಾಗಿರುತ್ತವೆ. ಈ ಅವಾಂತರಕ್ಕೆ ಪರಿಹಾರ ಮಾರ್ಗ ತಿಳಿಯದೆ ಅರ್ಜಿದಾರರು ಕಂಗಾಲಾಗಿದ್ದಾರೆ. ಕೆಪಿಎಸ್‌ಸಿ ನಮ್ಮ ನೆರವಿಗೆ ಬರುವುದೇ?                                                             
-

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.