ADVERTISEMENT

ಕೆಪಿಎಸ್‌ಸಿ ಅಸಾಂವಿಧಾನಿಕ ನಡೆ!

ಸುಧಾಕರ ಹೊಸಳ್ಳಿ
Published 14 ನವೆಂಬರ್ 2013, 19:30 IST
Last Updated 14 ನವೆಂಬರ್ 2013, 19:30 IST

ಗೆಜೆಟೆಡ್ ಪ್ರೊಬೇಷನರಿ ಹುದ್ದೆಯ ಆಯ್ಕೆಯಲ್ಲಿ, ಕೆಪಿಎಸ್‌ಸಿ ಅಕ್ರಮವೆಸಗಿರು­ವುದು ಬಹಿರಂಗವಾದ ಹಿನ್ನೆಲೆಯಲ್ಲಿ,  ಕೆಪಿಎಸ್‌ಸಿ ಸಿದ್ಧಪಡಿಸಿದ್ದ ಆಯ್ಕೆ ಪಟ್ಟಿಯನ್ನು ಸರ್ಕಾರ ರದ್ದುಪಡಿಸಿ ಮರುಪರೀಕ್ಷೆ ಮತ್ತು ಮರು ಮೌಲ್ಯಮಾಪನಕ್ಕೆ ಆದೇಶಿಸಿದೆ. ಪ್ರಸ್ತುತ ಕೆಪಿಎಸ್‌ಸಿ ತನ್ನದು ಸಾಂವಿಧಾನಿಕ ಸಂಸ್ಥೆ, ಸರ್ಕಾರಕ್ಕೆ ಆದೇಶ ನೀಡುವ ಅಧಿಕಾರವಿಲ್ಲ ಎಂದು ಸಮಜಾಯಿಷಿ ನೀಡುತ್ತಿದೆ.

ಯಾವುದೇ ಸಾಂವಿಧಾನಿಕ ಸಂಸ್ಥೆಯ ಅಧಿಕಾರವನ್ನು ಸರ್ಕಾರ ಮೊಟಕುಗೊಳಿಸು­ವಂತಿಲ್ಲ ಎಂಬುದು ವಾಸ್ತವ. ಅಂದಮಾತ್ರಕ್ಕೆ ಅಕ್ರಮ ಎಸಗಬಹುದೇ? ಸಂವಿಧಾನದ ೩೧೫ರಿಂದ ೩೨೩ರವರೆಗಿನ ಕಲಂ ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿಗಳಿಗೆ ಸಾಂವಿಧಾನಿಕ ಸ್ಥಾನಮಾನ ನೀಡಿದ್ದರೂ, ಅದೇ ಕಲಂಗಳಲ್ಲಿ ನಿರ್ಬಂಧ­ಗಳನ್ನು ವಿಧಿಸಿದೆ. ಉದಾ: ೩೨೦(ಡಿ). ಸರ್ಕಾರದ ಆದೇಶ ಪಾಲನೆ, ೨೬೩ನೇ ಕಲಂ ಅನ್ವಯ ರಾಜ್ಯಪಾಲರ ಆದೇಶದ ಅಧಿಕಾರ, ೩೧೮(ಎ) ರಾಜ್ಯಪಾಲರಿಗೆ ಜವಾಬ್ದಾರಿ, ೩೨೧(೧) ಕಾರ್ಯಾಧಿಕಾರಗಳ ಮುಂದುವ­ರಿಕೆಗೆ, ಶಾಸಕಾಂಗದ ಅಧಿಕಾರ. ಈ ಮೇಲಿನ ಪ್ರತಿಬಂಧಕಗಳನ್ನು ಮೀರುವ ಅಧಿಕಾರ ಕೆಪಿಎಸ್‌ಸಿಗೆ ಇರುವುದಿಲ್ಲ.  

ಈ ಸಂಸ್ಥೆಗಳು ದೋಷಿಯೆಂದಾ­ದಲ್ಲಿ, ಶಾಸ­ಕಾಂಗ ಮತ್ತು ಕಾರ್ಯಾಂಗಗಳು  ಅವುಗಳನ್ನು ಪ್ರಶ್ನಿಸುವ, ಪರಾಮರ್ಶಿಸುವ ಹಾಗೂ ರಾಜ್ಯ­ಪಾಲರ ಮುಖೇನ ನಿರ್ದೇಶಿಸುವ ಹಕ್ಕು ಇರುತ್ತದೆ. ರಾಜ್ಯಪಾಲರು ಈ ಸಂಬಂಧ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಸಲಹೆ ಪಡೆದು ಕ್ರಮ ಜರುಗಿಸಬಹುದು. 

ಸಾಂವಿಧಾನಿಕ ಸಂಸ್ಥೆ ಅಕ್ರಮದಲ್ಲಿ ಭಾಗಿ­ಯಾ­ದಾಗ, ತಮ್ಮ ಸಾಂವಿಧಾನಿಕ ರಕ್ಷಣೆಗಳಿಂದ ವಂಚಿತವಾಗುತ್ತದೆ. ಜೊತೆಗೆ ಸರ್ಕಾರಕ್ಕೆ ಮಾತ್ರ ಪರಮಾಧಿಕಾರವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.