ಮುಖ್ಯಮಂತ್ರಿಗಳು ಕೆರೆ ಅಭಿವೃದ್ಧಿ ಪ್ರಾಧಿಕಾರ ರಚನೆ ಘೋಷಿಸಿರುವುದು ಸ್ವಾಗತಾರ್ಹ. ಈ ಘೋಷಣೆ ಕೇವಲ ಪ್ರಚಾರವಾಗದೆ, ಕಾರ್ಯರೂಪಕ್ಕೆ ಬರಬೇಕು. ಕೆರೆಗಳು ರೈತರ, ಹಳ್ಳಿಗಾಡಿನ ಜನರ, ಜಾನುವಾರುಗಳ ಜೀವನಾಡಿ.
ಹಂತ, ಹಂತವಾಗಿ ರಾಜ್ಯದ ಎಲ್ಲಾ ಕೆರೆಗಳ ಹೂಳು ತೆಗೆದು, ಕೆರೆ ಏರಿ ಎತ್ತರಿಸಿ, ಕೆರೆ ಒತ್ತುವರಿಯನ್ನು ತೆರವುಗೊಳಿಸಿ, ನೀರಿನ ಸಂಗ್ರಹವನ್ನು ಹೆಚ್ಚಿಸಬಹುದು. ರಾಜ್ಯದ ಎಲ್ಲಾ ಕೆರೆಗಳ ಅಭಿವೃದ್ಧಿಯಿಂದ, ಅಂತರ್ಜಲ ಹೆಚ್ಚಾಗಿ, ಕುಡಿಯುವ ನೀರಿಗೆ, ವ್ಯವಸಾಯಕ್ಕೆ ಅನುಕೂಲವಾಗುತ್ತದೆ. ಇದು ರಾಜ್ಯದಲ್ಲಿ ವ್ಯವಸಾಯವನ್ನೇ ನಂಬಿರುವ ರೈತಾಪಿ ಜನರಿಗೆ ವರವಾಗಲಿ ಎಂದು ಆಶಿಸುತ್ತೇನೆ.
-ಪ್ರೊ. ನಾಗರಾಜು ಹುಲಿವಾನ ಮಂಡ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.