ADVERTISEMENT

ಕೇಳುವವರಿಲ್ಲದ ರಾಮಚಂದ್ರಪುರ!

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿದ, ವಿದ್ಯಾರಣ್ಯಪುರಕ್ಕೆ ಹೊಂದಿಕೊಂಡಿರುವ ರಾಮಚಂದ್ರಪುರವನ್ನು (ವಾರ್ಡ್ ನಂ.10) ಕೇಳುವವರಿಲ್ಲದಂತಾಗಿದೆ. ಇದು ಕೃಷಿ ಸಚಿವರ ಹಾಗೂ ಬಿಬಿಎಂಪಿ ಆಡಳಿತ ಪಕ್ಷದ ಸದಸ್ಯರ ಕ್ಷೇತ್ರ ಎನ್ನುವುದು ದುರಂತ.

ಇರುವ ಏಕೈಕ ಮುಖ್ಯರಸ್ತೆಯನ್ನು ಒಂದು ವರ್ಷದ ಹಿಂದೆ ಕಾವೇರಿ ಪೈಪು ಜೋಡಣೆಗಾಗಿ ಅಗೆದಿದ್ದು, ಇನ್ನೂ ದುರಸ್ತಿ ಕಂಡಿಲ್ಲ. ವಾಹನಗಳು ಹಾಗಿರಲಿ, ಮನುಷ್ಯರೇ ಓಡಾಡಲು ಕಷ್ಟವಾಗಿದೆ. ಇದ್ದ ಎರಡು ಮಾರ್ಗಗಳ ಬಸ್ ಸಂಚಾರವನ್ನು ರಸ್ತೆ ಸರಿಯಿಲ್ಲದ ಕಾರಣ ಹೇಳಿ ಒಂದಕ್ಕೆ ತಗ್ಗಿಸಲಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಇರುವ ಏಕೈಕ ಬಸ್ ನಿಲ್ದಾಣವನ್ನು ಹಗ್ಗ ಕಟ್ಟಿ ನಿಲ್ಲಿಸಿದ್ದರೂ ಯಾರ ಗಮನಕ್ಕೂ ಬಾರದಾಗಿದೆ.

ಮೂರು ವರ್ಷದ ಹಿಂದೆ ಪಾರ್ಕಿಗಾಗಿ ಗುದ್ದಲಿ ಪೂಜೆ ನಡೆಸಿದ್ದರೂ ಇದುವರೆಗೂ ಕಾಮಗಾರಿ ಪ್ರಾರಂಭವಾಗಿಲ್ಲ. ಚುನಾವಣೆ ಪೂರ್ವದಲ್ಲಿ ರಸ್ತೆ, ಪಾರ್ಕು, ಬಸ್ ನಿಲ್ದಾಣ, ರಸ್ತೆ ಅಗಲೀಕರಣಕ್ಕೆ ವಿಶೇಷ ಅನುದಾನದ ಬಗ್ಗೆ ಮಾತನಾಡಿದ ಜನಪ್ರತಿನಿಧಿಗಳು ಇದುವರೆವಿಗೂ ಗಮನಹರಿಸದೇ ಇರುವುದು ತಿಳಿಯದಾಗಿದೆ. ದಯವಿಟ್ಟು ಸಂಬಂಧಪಟ್ಟವರು ತಕ್ಷಣ ಗಮನಹರಿಸಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.