
ಪ್ರಜಾವಾಣಿ ವಾರ್ತೆಮಾಸ್ಕೊದಲ್ಲಿರುವ ಹಿಂದೂ ದೇವಾಲಯ ನೆಲಸಮ ಮಾಡಿದ ಘಟನೆ ಅತ್ಯಂತ ಗಂಭೀರವಾದದು. ಈ ದುಷ್ಕೃತ್ಯದಿಂದ ಅಲ್ಲಿನ ಕ್ರೈಸ್ತ ಮಿಷಿನರಿಗಳ ನಿಜವಾದ ಬಣ್ಣ ಬಯಲಾಗತೊಡಗಿದೆ.
ಹೊರ ದೇಶಗಳಲ್ಲಿರುವ ಹಿಂದೂ ದೇವಸ್ಥಾನಗಳಿಗೆ ಇನ್ನು ಉಳಿಗಾಲ ಇಲ್ಲ. ಭಾರತದಲ್ಲಿರುವ ಕ್ರೈಸ್ತ ಮಿಷನರಿಗಳು `ಎಲ್ಲ ಮಾನವರೂ ಪರಸ್ಪರ ಪ್ರೀತಿಯಿಂದ ಬಾಳಬೇಕು. ಎಲ್ಲ ಧರ್ಮಗಳು ಒಂದೇ~ ಎಂದು ಹೇಳುವುದು ಕೃತಕ ಅನ್ನಿಸುತ್ತಿದೆ.
ರಷ್ಯಾದ ಕ್ರೈಸ್ತ ಮಿಷಿನರಿಗಳ ಹಿಂದೂ ದೇವಸ್ಥಾನ ವಿರೋಧಿ ಧೋರಣೆ ಕೋಮುವಾದದ ಪ್ರತೀಕ. ಭಗವದ್ಗೀತೆಯ ಪರವಾಗಿ ತೀರ್ಪು ಬಂದಿರುವುದರಿಂದ ಮಿಷನರಿಗಳು ಸೇಡಿನ ಮನೋಭಾವ ತೋರಿ ದೇವಸ್ಥಾನ ನಾಶ ಮಾಡಿದ್ದಾರೆ. ಈ ಧೋರಣೆ ಖಂಡನೀಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.