ADVERTISEMENT

ಕ್ರೀಡಾ ರಾಜಕೀಯ

ಚನ್ನು ಅ.ಹಿರೇಮಠ ರಾಣಿಬೆನ್ನೂರು
Published 8 ಏಪ್ರಿಲ್ 2018, 19:30 IST
Last Updated 8 ಏಪ್ರಿಲ್ 2018, 19:30 IST

ಈಚೆಗೆ ಆರಂಭವಾದ 21ನೇ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಸಾಯಿಕೋಮ್ ಮೀರಾಬಾಯಿ ಚಾನು ಹಾಗೂ ಬೆಳ್ಳಿ ಪದಕ ಗೆದ್ದ ಗುರುರಾಜ್ ಪೂಜಾರಿ ಅವರಿಗೆ ಫಿಜಿಯೋಗಳೇ ಇಲ್ಲವೆಂಬುದನ್ನು ಕೇಳಿ ಬೇಸರವಾಯಿತು.

ಸಚಿವರು ದಂಡಯಾತ್ರೆ ಹೊರಟರೆ ಹಿಂದೊಂದು ಆಂಬುಲೆನ್ಸ್ ಇರುತ್ತದೆ. ವಿಧಾನಸೌಧ, ಲೋಕಸಭೆಗಳಲ್ಲಿ ಚಿಕಿತ್ಸಾಲಯಗಳು ಕಡ್ಡಾಯವಾಗಿರುತ್ತವೆ. ಇವರ ಜೀವಕ್ಕೆ ಮಾತ್ರ ಬೆಲೆಯೇ? ರಾಷ್ಟ್ರದ ಕೀರ್ತಿಪತಾಕೆಯನ್ನು ಪಸರಿಸುವ ಕ್ರೀಡಾಳುಗಳಿಗೆ ಕನಿಷ್ಠ ಒಬ್ಬ ಫಿಜಿಯೋವನ್ನು ಕಳುಹಿಸಲಾಗದಷ್ಟು ದಾರಿದ್ರ್ಯ ನಮ್ಮ ದೇಶಕ್ಕೆ ಬಂದಿದೆಯೇ? ಅಧಿಕಾರಿಗಳು ಮತ್ತು ರಾಜಕಾರಣಿಗಳ ಆಡಂಬರಕ್ಕೆ ಕೊರತೆ ಇಲ್ಲದ ನಮ್ಮ ದೇಶದಲ್ಲಿ, ಕ್ರಿಕೆಟ್ ಹೊರತುಪಡಿಸಿ, ಇನ್ನುಳಿದ ಕ್ರೀಡಾಪಟುಗಳ ಬಗ್ಗೆ ಇನ್ನಿಲ್ಲದ ತಾತ್ಸಾರ! ನಮ್ಮ ಆಡಳಿತಗಾರರು ಸುಧಾರಿಸುವುದು ಯಾವಾಗ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT