ಕ್ಷಮಾದಾನದ ಅರ್ಜಿಗಳನ್ನು ವಿಳಂಬ ವಾಗಿ ಇತ್ಯರ್ಥ ಮಾಡಿದ್ದಲ್ಲಿ ಅಪರಾಧಿಗಳ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಬಹುದು ಎಂದು ನೀಡಿರುವ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿರುವುದರಿಂದ ಕೇಂದ್ರಕ್ಕೆ ಮುಜುಗರ ಆಗಿದೆ. ಅಧಿಕಾರಶಾಹಿಗಳಿಗೆ ಈ ತೀರ್ಪಿನಿಂದ ಅನುಕೂಲ ಮತ್ತು ಅನನುಕೂಲ ಎರಡೂ ಆಗಿದೆ,
ಗಲ್ಲು ಶಿಕ್ಷೆಗೆ ಒಳಗಾಗಿರುವವರನ್ನು ಬದುಕಿಸಬೇಕು ಎಂಬ ಇಚ್ಛೆ ಇದ್ದರೆ ವಿಳಂಬ ನೀತಿ ಅನುಸರಿಸಿದರಾಯಿತು. ಇದನ್ನು ವಿಳಂಬದಾನ ಎಂದರೂ ತಪ್ಪಿಲ್ಲ. ವಿಳಂಬದಾನ ಜೀವದಾನಕ್ಕೆ ಮೆಟ್ಟಿಲಾಗು ತ್ತದೆ. ಅಪರಾಧಿಯನ್ನು ನೇಣು ಹಗ್ಗಕ್ಕೆ ಗುರಿ ಮಾಡಬೇಕೆಂದು ಮನಸ್ಸಿದ್ದರೆ ತ್ವರಿತ ವಾಗಿ ನಿರ್ಧಾರ ತೆಗೆದುಕೊಂಡು ಅಂತಹವ ರನ್ನು ನೇಣುಗಂಬಕ್ಕೇರಿಸಿ ಸುಪ್ರೀ ಕೋರ್ಟ್ ತೀರ್ಪಿಗೆ ತಲೆಬಾಗಿರುವುದಾಗಿ ಹೇಳಿಕೊಳ್ಳ ಬಹುದು. ಕ್ಷಮಾದಾನದ ಅರ್ಜಿಗಳನ್ನು ಎಷ್ಟು ದಿನಗಳೊಳಗೆ ಇತ್ಯರ್ಥ ಮಾಡಬೇಕು ಎಂಬುದನ್ನು ಕೋರ್ಟ್ ನಿಗದಿ ಪಡಿಸಿಲ್ಲ.
ಕ್ಷಮಾದಾನವನ್ನು ರಾಷ್ಟ್ರಪತಿಯವರೇ ನೀಡಬೇಕಾಗಿದ್ದರೂ ಅವರು ಈ ಕುರಿತು ನಿರ್ಧಾರ ತೆಗೆದುಕೊಳ್ಳಲು ಗೃಹಖಾತೆಯ ನಿರ್ದೇಶನವನ್ನೇ ಪಾಲಿಸಬೇಕು. ಸಚಿವಾಲ ಯವು ಎಲ್ಲಾ ಪ್ರಕರಣಗಳಲ್ಲೂ ಉದ್ದೇಶ ಪೂರ್ವವಾಗಿಯೇ ವಿಳಂಬ ನೀತಿ ಅನುಸರಿಸುತ್ತದೆ ಎನ್ನಲಾಗದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.