ADVERTISEMENT

ಗಾದಿ ನಾದ

ವಿಜಯಕಾಂತ ಪಾಟೀಲ
Published 19 ಫೆಬ್ರುವರಿ 2014, 19:30 IST
Last Updated 19 ಫೆಬ್ರುವರಿ 2014, 19:30 IST

ಗಾದಿ ನಾದ

ಇದು ವಿಷಕಾರಿ ಬೆಲ್ಲ, ಹುಷಾರು!
ಆ ರಂಗ ಈ ರಂಗ
ನಡುರಂಗ ಭೂಮಿಕೆಯೊಳು
ಝಳಪಿಸುತ್ತಿದೆ ರಣರಂಗ!

ಆ ವಾದ ಈ ವಾದಗಳ ಮದವೇರಿ
ಮೊಳಗುತ್ತಿದೆ ‘ಮೋಡಿ’ಗಳ
ಗಾದಿ ನಾದ!

ಗದ್ದುಗೆಯ ಅಡ್ಡದಾರಿಯೊಳು
ಗೆಲಲು ಥರಥರದ ಮಂತ್ರವೂದಿ
ಬೂದಿಯೆರಚಲು ಬರುತ್ತಿದ್ದಾರೆ;
ದಯವಿಟ್ಟು
ಕಣ್ಣ ಮುಚ್ಚಿಕೊಳ್ಳಿ,
ಕಿವಿ ಕಳಕೊಳ್ಳಿ,
ಬಾಯಿ ಹಿಡಕೊಳ್ಳಿ,
ಸುರಿಸಬೇಡಿ ಜೊಲ್ಲ;
ಹುಷಾರು, ಅದು ವಿಷಕಾರಿ ಬೆಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.