ADVERTISEMENT

ಗುಲ್ಬರ್ಗದಲ್ಲಿ ರಂಗಾಯಣ

ಮುದಗಲ್ ವೆಂಕಟೇಶ
Published 17 ಜನವರಿ 2012, 19:30 IST
Last Updated 17 ಜನವರಿ 2012, 19:30 IST

ಮೈಸೂರಿಗೆ ಸೀಮಿತವಾಗಿದ್ದ ರಂಗಾಯಣ ಈಗ ಶಿವಮೊಗ್ಗ ಮತ್ತು ಧಾರವಾಡದಲ್ಲಿ ಕಾರ್ಯನಿರ್ವಹಿಸುವ ಮೂಲಕ ತನ್ನ ಚಟುವಟಿಕೆಗಳನ್ನು ರಾಜ್ಯದ ಇತರೆಡೆಗೆ ವಿಸ್ತರಿಸಿದೆ. ಇದು ಸ್ವಾಗತಾರ್ಹ ಸಂಗತಿ.
 
ಭೌಗೋಳಿಕ ಮೇರೆ ಬದಲಾದ ಹಾಗೆ ಸಂಸ್ಕೃತಿ ಬದಲಾಗುತ್ತದೆ. ಅದಕ್ಕನುಗುಣವಾಗಿ ರಂಗಾಯಣವೂ ಕಾರ್ಯನಿರ್ವಹಿಸಬೇಕು. ರಂಗಾಯಣದ ಚಟುವಟಿಕೆಗಳಿಂದ ಗುಲ್ಬರ್ಗ ವಂಚಿತವಾಗಬಾರದು.

ಗುಲಬರ್ಗದಲ್ಲಿಯೂ ರಂಗಾಯಣ ಸ್ಥಾಪನೆ ನ್ಯಾಯಸಮ್ಮತ ಎಂಬುದು ಕಲಾಸಕ್ತರ ಅಭಿಮತ. ಇಲ್ಲಿನ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಸ್ಥಳವಿದೆ. ಕಟ್ಟಡಗಳು ಲಭ್ಯವಿವೆ. ರಂಗ ಚಟುವಟಿಕೆಗಳೂ ಇಲ್ಲಿ ಕ್ರಿಯಾಶೀಲವಾಗಿವೆ. ಸರ್ಕಾರ ಬರುವ ಹಣಕಾಸು ವರ್ಷದಿಂದ `ರಂಗಾಯಣ~ವನ್ನು ಆರಂಭಿಸುವ ಮೂಲಕ ರಂಗಚಟುವಟಿಗೆಗಳಿಗೆ ಇಂಬು ಕೊಡಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.