ADVERTISEMENT

ಗೌಡರ ‘ನಿವೃತ್ತಿ’ಯ ಗಡುವು!

ಪ್ರೊ ಆರ್‌ ವಿ ಹೊರಡಿ ಧಾರವಾಡ
Published 17 ಡಿಸೆಂಬರ್ 2013, 19:30 IST
Last Updated 17 ಡಿಸೆಂಬರ್ 2013, 19:30 IST

ಹರದನಹಳ್ಳಿಯಿಂದ ನವದೆಹಲಿಯ ಸಿಂಹಾಸನದ­ವರೆಗಿನ, ಮಣ್ಣಿನಮಗ, ಮಾಜಿ ಪ್ರಧಾನಿ ದೇವೇಗೌಡರ ರಾಜಕೀಯ ಪಯಣ ಸುದೀ­ರ್ಘವೂ ರೋಚಕವೂ ಆಗಿದೆ.

ಅವರು ಅನೇಕ ಅಂತಿಮ ‘ಮಾಡು ಮಡಿ’ಯ ರಾಜಕೀಯ ಹೋರಾ­ಟಗಳನ್ನು ಮಾಡಿದ್ದರೂ ಅವರಿಗೆ ದಣಿವು ‘ವಿಶ್ರಾಂತಿ’ ಎಂಬುದಿಲ್ಲ! ಜೆಡಿಎಸ್‌ ‘ಕುಟುಂಬ ಪಕ್ಷ’ ಎಂಬ ಟೀಕೆಯನ್ನು ಅವರು ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ.

ಈ ಪಕ್ಷವನ್ನು ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ತರುವವರೆಗೆ (ಅರ್ಥಾತ್‌ ಪುತ್ರ ಕುಮಾರಸ್ವಾಮಿ ಮತ್ತೊಮ್ಮೆ  ಮುಖ್ಯಮಂತ್ರಿ ಆಗುವವರೆಗೆ) ರಾಜಕೀಯದಲ್ಲಿದ್ದು ಹೋರಾಟ ಮಾಡುವ ಶಪಥವನ್ನು ದೊಡ್ಡ­ಗೌಡರು ತೊಟ್ಟಿದ್ದಾರೆ.

ತಮಗೆ ಯಾವುದೇ ಅಧಿಕಾರದ ಆಸೆ ಇಲ್ಲವೆಂದು ಪದೇ ಪದೇ ಹೇಳುವ ಗೌಡರು ‘ತೃತೀಯ ರಂಗ’ ಎಂಬ ಮರೀಚಿಕೆಯ ಬೆನ್ನು ಹತ್ತಿರುವ ‘ಲಘು ತೂಕದ’ ನಾಯಕರ ವೇದಿಕೆಯಲ್ಲಿ ಕಾಣಿ­ಸಿ­ಕೊಂಡು ತಮ್ಮ ಹವಣಿಕೆಗಳಿಗೆ ಭರವಸೆಯ ನೀರೆರೆಯುತ್ತಿದ್ದಾರೆ.
‘ಹುಣಿಸೆ ಮುಪ್ಪಾದರೂ ಹುಳಿ ಮುಪ್ಪಲ್ಲ’ ಎಂಬ ಗಾದೆ ಗೌಡರ ವಿಷಯದಲ್ಲಿ ಸಾರ್ವಕಾಲಿಕ ಸತ್ಯ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.