ADVERTISEMENT

ಗೌರವ ಡಾಕ್ಟರೇಟ್‌ಗೆ ಅರ್ಜಿ!

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 19:30 IST
Last Updated 21 ಫೆಬ್ರುವರಿ 2012, 19:30 IST

ಗುಲಬರ್ಗಾ ವಿಶ್ವವಿದ್ಯಾಲಯದ ನಿಯಮಾವಳಿಯಂತೆ ಕಲೆ, ಸಾಹಿತ್ಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕೊಡುವ ಗೌರವ ಡಾಕ್ಟರೇಟ್ ಪದವಿಗೆ ಈ ಬಾರಿ-ಕೆಲಸಕ್ಕೆ ಅರ್ಜಿ ಹಾಕಿದಂತೆ-31 ಜನ ಅರ್ಜಿ ಹಾಕಿದ್ದಾರೆ.

ಅರ್ಜಿ ಹಾಕಿದವರಿಗೆ ಡಾಕ್ಟರೇಟ್ ಕೊಟ್ಟರೆ ಆ ಪದವಿಗೆ ಗೌರವ ಇರುತ್ತದೆಯೇ? ವಿ.ವಿಯ ಸಿಂಡಿಕೇಟ್ ಸದಸ್ಯರು ಪದೇ ಪದೇ ಯಾರ ಹೆಸರನ್ನು ಪ್ರಸ್ತಾಪ ಮಾಡುತ್ತಾರೋ ಅಂಥವರ ಹೆಸರನ್ನೇ ರಾಜ್ಯಪಾಲರ ಅನುಮೋದನೆಗಾಗಿ ಕಳಿಸಿಕೊಡುತ್ತಾರೆ.

ಗೌರವ ಡಾಕ್ಟರೇಟ್ ಪದವಿ ಬೇಕೆನ್ನುವರು ಮೊದಲೇ ಈ ಸದಸ್ಯರ ಜೊತೆ ಮಾತನಾಡಿ ನಮ್ಮ ಹೆಸರನ್ನೆ ಪ್ರಸ್ತಾಪ ಮಾಡಿ ಎಂದು ಹೇಳಿರುತ್ತಾರೆ.
 
ಆಡಳಿತ ಪಕ್ಷ ಸಿಂಡಿಕೇಟ ಸದಸ್ಯರನ್ನು ಆಯ್ಕೆಮಾಡಿ ಕಳಿಸಿದ್ದು ತಮಗೆ ಬೇಕಾದವರಿಗೆ ಗೌರವ ಡಾಕ್ಟರೇಟ್ ಪದವಿ ಕೊಡಿಸುವುದಕ್ಕಲ್ಲ. ವಿ.ವಿಯಲ್ಲಿ ಸುಗಮ ಆಡಳಿತ ನಡೆಯುವುದಕ್ಕೆ ನೆರವಾಗಲು ಎನ್ನುವುದನ್ನು ಅವರು ಅರ್ಥಮಾಡಿಕೊಳ್ಳಬೇಕು.

ಹೈದ್ರಾಬಾದ ಕರ್ನಾಟಕದಲ್ಲಿ ಸಾಹಿತ್ಯಿಕವಾಗಿ, ಸಾಂಸ್ಕ್ರತಿಕವಾಗಿ ಸೇವೆ ಸಲ್ಲಿಸಿದ ಹಲವು ಕಲಾವಿದರು ಇದ್ದಾರೆ. ಅಂತವರನ್ನು ಕರೆದು ಗೌರವಿಸಿದರೆ ಅವರಿಗೂ ವಿಶ್ವವಿದ್ಯಾಲಯಕ್ಕೂ ಗೌರವ ಬರುತ್ತದೆ.

ವಿ.ವಿಗಳು ಹೆಚ್ಚಾಗಿ ಮಠಾಧೀಶರಿಗೆ ರಾಜಕೀಯ ಪುಡಾರಿಗಳಿಗೆ ಗೌರವ ಡಾಕ್ಟರೇಟ್ ಕೊಡುವುದನ್ನು ನಿಲ್ಲಿಸಬೇಕು.

ಫೆ.27 ರಂದು ನಡೆಯುವ ಘಟಿಕೋತ್ಸವದಲ್ಲಿ ಅರ್ಹರಿಗೆ ಗೌರವ ಡಾಕ್ಟರೇಟ್ ಸಿಗುವಂತಾಗಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.