ADVERTISEMENT

ಘಾಟಿ ಸುಬ್ರಮಣ್ಯ ದೇವಸ್ಥಾನಕ್ಕೆ ಸೌಕರ್ಯ ಕಲ್ಪಿಸಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2012, 19:30 IST
Last Updated 13 ಜೂನ್ 2012, 19:30 IST

ನಾನು ಇತ್ತೀಚೆಗೆ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಹಾಗೂ ವಿದುರಾಶ್ವತ್ಥ ದೇವಸ್ಥಾನಕ್ಕೆ ಅಲ್ಲಿಯ ದೇವರ ದರ್ಶನಕ್ಕೆ ಹೋಗಿದ್ದೆ. ಇವೆರಡೂ ಸ್ಥಳಗಳಿಗೆ ಅಪಾರವಾದ ಭಕ್ತರು ಭೇಟಿ ನೀಡುತ್ತಾರೆ. ಆದರೆ ಈ ಎರಡೂ ಸ್ಥಳಗಳಲ್ಲಿ ಕನಿಷ್ಠ ಸೌಕರ್ಯಗಳೂ ಇಲ್ಲದಿರುವುದನ್ನು ಕಂಡು ಬಹಳ ಬೇಜಾರಾಯಿತು.
 
ಮುಜರಾಯಿ ಇಲಾಖೆಗೆ ಅಪಾರ ವರಮಾನ ತರುವ ಈ ಕ್ಷೇತ್ರದ ಬಗ್ಗೆ ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಿ ಕ್ಷೇತ್ರದಲ್ಲಿ ನೈರ್ಮಲ್ಯ ಕಾಪಾಡಬೇಕು. ಭಾನುವಾರ ಹಾಗೂ ವಿಪರೀತ ಭಕ್ತರು ಸೇರುವ ದಿನಗಳಲ್ಲಿ ಇಲ್ಲಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಖುದ್ದು ಹಾಜರಿದ್ದು ಗಮನಿಸಬೇಕು.

ಇಡೀ ಕ್ಷೇತ್ರದಲ್ಲಿ ಸ್ವಚ್ಛತೆಯ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿ ಒಂದಾದರೂ ಉತ್ತಮ ಉಪಹಾರ ಕೇಂದ್ರವಿಲ್ಲದೆ ಎಲ್ಲೆಂದರಲ್ಲಿ ಸಿಕ್ಕಿದ ಆಹಾರವನ್ನು ತಿನ್ನಬೇಕಾಗಿದೆ. ದೇವಾಲಯದ ವತಿಯಿಂದ ಭಕ್ತಾದಿಗಳಿಗೆ ನಿತ್ಯ ಅನ್ನದಾನ ಸೇವೆ ಜರುಗುವ ವ್ಯವಸ್ಥೆ ಮಾಡಲಿ ಎಂದು ವಿನಂತಿಸುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.