ADVERTISEMENT

ಚರಂಡಿ ಕಸ ಚರಂಡಿಗೇ!

​ಪ್ರಜಾವಾಣಿ ವಾರ್ತೆ
Published 25 ಜೂನ್ 2012, 19:30 IST
Last Updated 25 ಜೂನ್ 2012, 19:30 IST

ಬನಶಂಕರಿ ಒಂದನೇ ಹಂತ ಎರಡನೇ ಬ್ಲಾಕ್, 17ನೇ ಮುಖ್ಯ ರಸ್ತೆಯಲ್ಲಿ ವಾರದ ಹಿಂದೆ ರಸ್ತೆಯ ಎರಡೂ ಬದಿಯ ಚರಂಡಿಗಳಿಂದ ಕಸ - ಮಣ್ಣು ಇತ್ಯಾದಿ ಹೊರತೆಗೆದು ಚರಂಡಿಗಳನ್ನು ಶುಚಿಗೊಳಿಸುವ ಕಾರ್ಯ ಮಹಾನಗರ ಪಾಲಿಕೆಯ ಕಡೆಯಿಂದ ನಡೆದಿದೆ.
 
ಆದರೆ ಚರಂಡಿಗಳಿಂದ ತೆಗೆದ ಕಸವನ್ನು ವಿಲೇವಾರಿ ಮಾಡದೆ ಇರುವುದರಿಂದ ಅದು ಮತ್ತೆ ಅದೇ ಚರಂಡಿ ಪಾಲಾಗುತ್ತಿದೆ. ಅಕ್ಕಪಕ್ಕದ ಮನೆಗಳ ಹಿರಿಯ ನಾಗರಿಕರು ಹಾಗೂ ಮಕ್ಕಳಿಗೆ ಮನೆ ಮುಂದೆ ಓಡಾಡಲೂ ತೊಂದರೆಯಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಚರಂಡಿಗೆ ಬೀಳುವ ಅಪಾಯ ತಪ್ಪಿದ್ದಲ್ಲ.

ಮಳೆಗಾಲಕ್ಕೆ ಮುಂಚಿತವಾಗಿ ಚರಂಡಿ ಶುಚಿಗೊಳಿಸುವುದು ಸ್ವಾಗತಾರ್ಹ. ಆದರೆ ಮಾಡಿದ ಕೆಲಸವನ್ನು ಪೂರ್ಣಗೊಳಿಸುವುದೂ ಅಷ್ಟೇ ಅಗತ್ಯವಲ್ಲವೇ? ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಲಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.