ವಿಧಾನಸಭಾ ಚುನಾವಣೆ ದಿನೇ ದಿನೇ ರಂಗು ಪಡೆಯುತ್ತಿದೆ. ಅಕ್ರಮಗಳಿಗೆ ಕಡಿವಾಣ ಹಾಕುವ ಸಲುವಾಗಿ ಚುನಾವಣಾ ಆಯೋಗ ನಾನಾ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಆದರೆ ಅಂತರ್ಜಾಲದಲ್ಲಿ ಹರಿದಾಡುವ ಚುನಾವಣಾ ಪ್ರಚಾರಕ್ಕೆ, ಪಕ್ಷದ ಪರ ಮನಒಲಿಸುವ ಮೊಬೈಲ್ ಸಂದೇಶಗಳಿಗೆ, ಸಾಮಾಜಿಕ ತಾಣಗಳಲ್ಲಿನ ಪ್ರಚಾರ ಅಬ್ಬರ ನಿಯಂತ್ರಿಸುವ ಬಗ್ಗೆ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಇದಕ್ಕೆ ಚುನಾವಣಾ ನೀತಿ ಸಂಹಿತೆ ಅನ್ವಯಿಸುವುದಿಲ್ಲವೇ..?
ಮೊಬೈಲ್, ಸಾಮಾಜಿಕ ತಾಣಗಳಿಗೆ ಚುನಾವಣೆ ಸಂದೇಶಗಳು, ಪಕ್ಷ ಪರ ಮತ ಯಾಚನೆಯ ಪೋಟೋಗಳು ಸಿಕ್ಕಾಪಟ್ಟೆರವಾನೆಯಾಗುತ್ತಿವೆ. ಇದು ಕಿರಿಕಿರಿ ಉಂಟುಮಾಡುತ್ತಿದೆ. ಈ ಬಗ್ಗೆ ಚುನಾವಣಾ ಅಧಿಕಾರಿಗಳು ಗಮನಹರಿಸಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.