ADVERTISEMENT

ಛಾಪಾ ಕಾಗದ ತೊಂದರೆ ತಪ್ಪಿಸಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 19:30 IST
Last Updated 15 ಜೂನ್ 2011, 19:30 IST

ಕಂದಾಯ ಇಲಾಖೆಯು ರಾಜ್ಯದ ಎಲ್ಲಾ ಉಪ-ನೋಂದಣಾಧಿಕಾರಿಯವರ ಕಚೇರಿಯಿಂದ ಛಾಪಾ ಕಾಗದಗಳನ್ನು ಮಾರಾಟ ಮಾಡುತ್ತಿದೆ. ಇತ್ತೀಚೆಗೆ ದಸ್ತಾವೇಜು ಹಾಳೆ ಅಥವಾ ಬೇರಾವುದೇ ಹಾಳೆಯ ಮೇಲೆ ಬೆರಳಚ್ಚು ಮಾಡಿಸಿದ ನಂತರವೇ ಉಬ್ಬಚ್ಚು ಮಾಡಲಾಗುತ್ತಿದೆ.

ಇದರಿಂದ ಸಾರ್ವಜನಿಕರಿಗೆ ಮತ್ತು ವಕೀಲರಿಗೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟ ಸಚಿವರು, ಛಾಪಾ ಕಾಗದಗಳನ್ನು ಮುಕ್ತವಾಗಿ ಖಾಲಿ ಹಾಳೆಯ ಮೇಲೆ ಉಬ್ಬಚ್ಚು ಮಾಡಿ ಮಾರಾಟ ಮಾಡುವಂತೆ ಉಪನೋಂದಣಾಧಿಕಾರಿಗಳಿಗೆ ಆದೇಶ ನೀಡಲಿ. ಇಲ್ಲವೇ ಸದರಿ ಛಾಪಾ ಕಾಗದಗಳನ್ನು ಸರ್ಕಾರದ ಖಜಾನೆಯಿಂದ ಮಾರಾಟ ಮಾಡಲು ಆದೇಶ ನೀಡಬೇಕೆಂದು ಪ್ರಾರ್ಥಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.