ADVERTISEMENT

ಜನಬೆಂಬಲ ಅಮುಖ್ಯವೇ?

​ಪ್ರಜಾವಾಣಿ ವಾರ್ತೆ
Published 31 ಮೇ 2018, 19:30 IST
Last Updated 31 ಮೇ 2018, 19:30 IST

‘ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪುಣ್ಯಾತ್ಮ, ನನಗೆ ಮುಖ್ಯಮಂತ್ರಿ ಆಗಲು ಅವಕಾಶ ಕಲ್ಪಿಸಿದರು’ (ಪ್ರ.ವಾ., ಮೇ 31) ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರಾಹುಲ್ ಗಾಂಧಿಯನ್ನು ಮುಕ್ತಕಂಠದಿಂದ ಹೊಗಳಿ ತಮ್ಮ ಕೃತಜ್ಞತೆಯನ್ನು ಸಮರ್ಪಿಸಿದ್ದಾರೆ.

‘ಮುಖ್ಯಮಂತ್ರಿ ಪದವಿಗೆ ಹಾತೊರೆಯುತ್ತಿದ್ದ ನನಗೆ ಮತದಾರರು ಅಡ್ಡಗಾಲು ಹಾಕಿದರೇನಂತೆ, ನನ್ನ ಕನಸು ನನಸಾಗಲು ಒಬ್ಬ ಆಶ್ರಯದಾತ ದೊರೆತನಲ್ಲ!’ ಎನ್ನುವ ಕೃತಜ್ಞತಾಭಾವ ಕುಮಾರಸ್ವಾಮಿಯವರದ್ದು.

ಪದವಿ, ಅಧಿಕಾರಗಳ ಮುಂದೆ ಸ್ವಾಭಿಮಾನ ನಗಣ್ಯ! ಪ್ರಜಾತಂತ್ರದಲ್ಲಿ ನಿರ್ಣಾಯಕವಾಗುವುದು ಪ್ರಜಾಭಿಪ್ರಾಯ ಅಲ್ಲ ಎಂದಂತಾಯ್ತು ಅಲ್ಲವೇ?

ADVERTISEMENT

– ಸಾಮಗ ದತ್ತಾತ್ರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.