ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಡುವ ಆದಾಯ ತೆರಿಗೆ (ಐ.ಟಿ) ಅಧಿಕಾರಿಗಳು, ತೆರಿಗೆ ವಂಚನೆಯ ಶಂಕೆ ಹಿನ್ನೆಲೆಯಲ್ಲಿ ವ್ಯಕ್ತಿ, ಸಂಸ್ಥೆಗಳ ಮೇಲೆ ದಾಳಿ ಮಾಡುವುದು ಸಹಜ. ಇದು ಅವರ ಕರ್ತವ್ಯ. ತಮ್ಮ ಜಾತಿಯ ಮಠದ ಮೇಲೆ ದಾಳಿ ಮಾಡಿದರು ಎಂದು ಆರೋಪಿಸುವ ಒಂದಿಬ್ಬರು ಶಾಸಕರು ಬರಿ ಒಂದು ಸಮುದಾಯದ ಪರವಾಗಿ ನಿಲ್ಲುವುದು ಅವರ ಜವಾಬ್ದಾರಿಯಲ್ಲ.
ಪ್ರತಿ ವಿಷಯವನ್ನು ಜಾತೀಕರಣಗೊಳಿಸಿ ಅದರಿಂದ ರಾಜಕೀಯ ಲಾಭವನ್ನು ಪಡೆಯುವ ಗೋಸುಂಬೆ ನಾಯಕರ ಬಗ್ಗೆ ಜನರು ತಲೆಕೆಡಿಸಿಕೊಳ್ಳಬಾರದು. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ನಾವೆಲ್ಲರೂ ಜಾತಿ, ಧರ್ಮ, ಉಪಜಾತಿ ಅಂತ ಎಲ್ಲಿಯವರೆಗೆ ಈ ಕಿಚ್ಚು ಇರಿಸಿಕೊಳ್ಳೋಣ? ದೇಶ ದೊಡ್ಡದೋ ಮಠ ದೊಡ್ಡದೋ? ಹಿಂದೊಮ್ಮೆ ಎಲ್. ಬಸವರಾಜು ಅವರು ಸಾಹಿತ್ಯ ಸಮ್ಮೇಳನದಲ್ಲಿ, `ಮಠಗಳನ್ನು ರಾಷ್ಟ್ರೀಕರಣ ಮಾಡಿ' ಎಂದು ಈ ಕಾರಣಕ್ಕಾಗಿಯೇ ಹೇಳಿದ್ದಿರಬಹುದು.
ಅಕ್ರಮ ಆಸ್ತಿ, ಕಪ್ಪುಹಣ, ಭೂಕಬಳಿಕೆ ಆರೋಪಗಳನ್ನು ಎದುರಿಸುತ್ತಿರುವ ಮಠಾಧಿಪತಿಗಳನ್ನು ಜಾತಿಯ ಹೆಸರಿನಲ್ಲಿ ಶಾಸಕರು, ಮಂತ್ರಿಗಳು, ಸಂಘಟನೆಗಳು ಸಮರ್ಥಿಸಿಕೊಂಡರೆ ದೇಶ ಕಾಯುವುದು ಹೇಗೆ? ಜಾತಿಗಿಂತ ದೇಶ ದೊಡ್ಡದು, ಪ್ರಜಾಪ್ರಭುತ್ವವನ್ನು ಗೌರವಿಸುವ ಕಾಳಜಿಯ ಅಗತ್ಯ ಜಾತಿ ಸಂಘಟನೆಗಳಿಗೆ ಅರ್ಥವಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.