ADVERTISEMENT

ಜಾತಿ ಗಣತಿ ಆನ್‌ಲೈನ್ ಮೂಲಕ ಮಾಡಲಿ

ರಮಾಕಾಂತ, ಕಮತಗಿ, ರೋಣ
Published 14 ಜುಲೈ 2013, 19:59 IST
Last Updated 14 ಜುಲೈ 2013, 19:59 IST

ರಾಜ್ಯದಲ್ಲಿ ಜಾತಿವಾರು ಜನಗಣತಿ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಇದು ಐತಿಹಾಸಿಕ ನಿರ್ಧಾರ. ಗಣತಿ ಎಂದಾಕ್ಷಣ ನಮಗೆಲ್ಲ ಭಯವಾಗುತ್ತದೆ. ಗಣತಿ ಎಂದರೆ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪಾಠ ಮಾಡುವುದರಿಂದ ಬಿಡಿಸಿ ಮನೆ-ಮನೆ ಕೇರಿ ಕೇರಿ ತಿರುಗಾಡಿಸುವುದು. ಇದಕ್ಕೂ ಶಿಕ್ಷಕರನ್ನು ಬಳಸಿದರೆ, ಮೊದಲೇ ಶಿಕ್ಷಕರ ಕೊರತೆ ಎದುರಿಸುತ್ತಿರುವ ಸರ್ಕಾರಿ ಶಾಲೆಗಳು  ಮತ್ತಷ್ಟು ನಲುಗಿ ಹೋಗುತ್ತವೆ. ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಪಾಲಕರು ಶಾಲೆಗೆ ಮಕ್ಕಳನ್ನು ಕಳಿಸಲು ಹಿಂದೇಟು ಹಾಕುತ್ತಾರೆ.

ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವವರು ಅಧಿಕಾರಿಗಳು ಮತ್ತು ಶ್ರೀಮಂತರ ಮಕ್ಕಳಲ್ಲ.  ಹಿಂದುಳಿದ ಬಡಜನತೆಯ ಮಕ್ಕಳು. ಇಂಥವರನ್ನು ಶಿಕ್ಷಣದಿಂದ ವಂಚಿಸುವುದು ಸಲ್ಲದು. ಪಡಿತರ ಚೀಟಿ, ಆಧಾರ್ ಕಾರ್ಡ್, ಸ್ಮಾರ್ಟ್ ಕಾರ್ಡ್ ಮಾಡಿದ ರೀತಿಯಲ್ಲಿ ಆನ್‌ಲೈನ್ ಮೂಲಕ  ಜಾತಿ ಗಣತಿಗೆ ಅವಕಾಶ ನೀಡಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದಂತೆಯೂ ಆಗುತ್ತದೆ.

ಬಡವರು ಉದ್ಯೋಗ ಬಿಟ್ಟು ಗಣತಿ ದಾರರನ್ನು ಕಾಯುತ್ತ ಕುಳಿತುಕೊಳ್ಳುವುದು, ಗಣತಿದಾರರು ಶಾಲೆಗಳನ್ನು ಹಾಳುಗೆಡಹುವುದು ತಪ್ಪಿಸಿದಂತಾಗುವುದು. ಸರ್ಕಾರ ಈ ವಿಚಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.