ADVERTISEMENT

ಜಾತ್ಯತೀತತೆ ಮರೆತ ನಾಯಕರು

ಚೂಡಸಂದ್ರ ಮುನಿರಾಜು ಸಿ.ಬೆಂಗಳೂರು.
Published 2 ಏಪ್ರಿಲ್ 2013, 19:59 IST
Last Updated 2 ಏಪ್ರಿಲ್ 2013, 19:59 IST

ರಾಜ್ಯ ರಾಜಕಾರಣದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನು ಗಮನಿಸುವುದಾದರೆ, `ಜಾತಿ ರಾಜಕಾರಣ' ಎಂಬುದು ಎಷ್ಟು ಬಲವಾಗಿ ನಮ್ಮ ರಾಜ್ಯದಲ್ಲಿ ಬೇರೂರಿದೆ ಎಂಬುದು ಮನದಟ್ಟಾಗುತ್ತದೆ.

ರಾಷ್ಟ್ರೀಯ ಪಕ್ಷವೊಂದರ ಪ್ರಮುಖ ನಾಯಕರು ತಮ್ಮ ತಮ್ಮ ಜಾತಿಯ ಅಭ್ಯರ್ಥಿಗಳ ಪರವಾಗಿ ಮುಂಬರುವ ವಿಧಾನಸಭಾ ಚುನಾವಣೆಯ ಟಿಕೆಟ್‌ಗಳಿಗಾಗಿ ಲಾಬಿ ನಡೆಸುತ್ತಿರುವುದು ಇದನ್ನು ಸಮರ್ಥಿಸುತ್ತದೆ. ರಾಜ್ಯದ ರಾಜಕೀಯದಲ್ಲಿ ಜಾತ್ಯತೀತ ಮೌಲ್ಯವನ್ನು ಎತ್ತಿಹಿಡಿದು ನೈತಿಕತೆ ಪ್ರಾಮಾಣಿಕತೆಗಳನ್ನು ಪ್ರತಿಷ್ಠಾಪಿಸುವ ಹೊಣೆ ಹೊತ್ತ ರಾಜಕಾರಣಿಗಳೇ ಈ ರೀತಿ ಜಾತಿ ರಾಜಕಾರಣಕ್ಕೆ ಮುಂದಾಗಿರುವುದು ನಾಚಿಕೆಗೇಡಲ್ಲವೇ?

 ಒಬ್ಬ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಅವನಿಗಿರಬೇಕಾದ ಕನಿಷ್ಠ ಅರ್ಹತೆಗಳಿಲ್ಲದಿದ್ದರೂ ಸರಿಯೆ ಅವನೊಬ್ಬ ಬಲಿಷ್ಠ ಜಾತಿಯ ಪ್ರತಿನಿಧಿಯಾಗಿದ್ದರೆ ಸಾಕು ಅಂತಹವರಿಗೆ ಚುನಾವಣಾ ಟಿಕೆಟ್ ನೀಡುವ ಪರಿಪಾಠ ಪ್ರಾರಂಭವಾಗುತ್ತಿದೆ ನಿಜಕ್ಕೂ ಇದೊಂದು ವಿಪರ್ಯಾಸದ ಸಂಗತಿ. ಹೀಗೆಯೇ ಮುಂದುವರೆದರೆ ಮುಂಬರುವ ದಿನಗಳಲ್ಲಿ ಜಾತಿ ಆಧಾರಿತವಾಗಿ ಈ ರಾಜ್ಯವನ್ನು ವಿಂಗಡಣೆ ಮಾಡಿದರೂ  ಅಚ್ಚರಿಯೇನಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.