ADVERTISEMENT

ಜೇಲು ಜೈಜೈ !

ಪ್ರೊ.ಜಿ.ಎಚ್.ಹನ್ನೆರಡುಮಠ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ಬಂತು ಬಂಧನ ಇದೇ ನಂದನ
ದೇವ ದೇವಗೆ ವಂದನ
ಜೇಲು ಜೈಜೈ ಕೋರ್ಟು ಸೈಸೈ
ಸಕಲ ಸುಂದರ ಸಾಧನ
ದುಡ್ಡಿನಿಂದ ದುಡ್ಡು ಢಂಢಂ
ಕಟ್ಟು ಕಟ್ಟಳೆ ಢುಂಢುಂ
ದುಡ್ಡು ತೂರಿ ಮಡ್ಡು ಬಿಡಿಸು
ರಾಜಕಾರಣ ರಿಂಝಿಂ
ನೋಟಿನಿಂದ ನೋಟು ಬೆಳೆಸು
ಬೇಡ ಜೋಳ ರಾಗಿಯು
ಚಿನ್ನದಿಂದ ಚಿನ್ನ ಚನ್ನ
ಬೇಡ ಕಡ್ಲಿ ಸಜ್ಜಿಯು
ಪ್ರಜಾರಾಜ್ಯಾ ರಜಾರಾಜ್ಯಾ
ವಜಾಮಾಡು ಜಾಣರ
ನೋಟು ಕೊಟ್ಟು
ವೋಟು ಪಡೆವರ
ನೋಡು ರಾವಣ
ಕೋಣರ !!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.