ADVERTISEMENT

ಟೆಲಿಫೋನ್ ಸರಿಪಡಿಸಿ

ಜಿ.ಸಿದ್ದಗಂಗಯ
Published 1 ಏಪ್ರಿಲ್ 2013, 19:59 IST
Last Updated 1 ಏಪ್ರಿಲ್ 2013, 19:59 IST

ಬಿಬಿಎಂಪಿ ಲಗ್ಗೆರೆ ಮುಖ್ಯರಸ್ತೆಯಲ್ಲಿ ಕಾವೇರಿ ನೀರಿನ 4ನೇ ಹಂತದ ಪೈಪುಗಳನ್ನು ಮುಖ್ಯರಸ್ತೆಯಲ್ಲಿ ಅಳವಡಿಸುವ ಕಾರ್ಯವು ಕಳೆದ ಒಂದು ವರ್ಷದಿಂದಲೂ ನಡೆದಿದೆ. ಜೊತೆಗೆ ಬೆಂಗಳೂರು ಜಲಮಂಡಳಿಯವರು ಒಳಚರಂಡಿಯ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ಲಗ್ಗೆರೆಯ 5-6 ಬಡಾವಣೆಗಳ ಅಡ್ಡರಸ್ತೆ ಮತ್ತು ಮುಖ್ಯರಸ್ತೆಗಳನ್ನು ಜೆಸಿಬಿ ಯಂತ್ರದೊಂದಿಗೆ ಭೂಮಿಯನ್ನು ಅಗೆದು ಲಗ್ಗೆರೆ ಮುಖ್ಯರಸ್ತೆಯನ್ನು ಗುಂಡಿಗಳ ತಾಣವನ್ನಾಗಿ ಮಾಡಿಬಿಟ್ಟಿರುತ್ತಾರೆ.

ದುರದೃಷ್ಟಕರ ಮೇಲಿನ ಎರಡು ಕಾಮಗಾರಿಗಳನ್ನು ನಿರ್ವಹಿಸುತ್ತಿರುವಾಗ ಭೂಮಿಯಲ್ಲಿ ಹಾದುಹೋಗಿರುವ ಬಿಎಸ್‌ಎನ್‌ಎಲ್ ಟೆಲಿಫೋನ್ ಕೇಬಲ್‌ಗಳು ತುಂಡು ತುಂಡಾಗಿದ್ದು ಲಗ್ಗೆರೆಯ ಚೌಡೇಶ್ವರಿ ನಗರದಲ್ಲಿನ ಎಲ್ಲಾ ಸ್ಥಿರ ದೂರವಾಣಿಗಳು ಕೆಟ್ಟು ಒಂದು ವರ್ಷ ಕಳೆದಿದೆ.

ಈ ಬಗ್ಗೆ ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಸಹ ಏನೂ ಪ್ರಯೋಜನವಾಗಲಿಲ್ಲ.

ಈಗಲಾದರೂ ಬಿಎಸ್‌ಎನ್‌ಎಲ್‌ನ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಗಮನಹರಿಸಿ ಕಳೆದ ಒಂದು ವರ್ಷಗಳಿಂದಲೂ ಕೆಟ್ಟು ಹೋಗಿರುವ ನಮ್ಮ ಟೆಲಿಫೋನ್‌ಗಳಿಗೆ ಹೊಸ ಕೇಬಲ್ ಹಾಕಿಕೊಡುತ್ತಾರೆಂದು ಆಶಿಸೋಣವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT