ADVERTISEMENT

ತಂಗುದಾಣ ನಿರ್ಮಿಸಿ

ಕುಂದು ಕೊರತೆ

ಜೆ.ಆರ್‌.ಆದಿನಾರಾಯಣ ಮುನಿ, ಬೆಂಗಳೂರು
Published 14 ಡಿಸೆಂಬರ್ 2015, 19:59 IST
Last Updated 14 ಡಿಸೆಂಬರ್ 2015, 19:59 IST

ಕೆಂಗೇರಿ ಉಪನಗರದದಿಂದ 401 ಕೆ, 401 ನಗರ ಸಾರಿಗೆ ವಾಹನಗಳು ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಹೋಗುತ್ತಿದ್ದು, ಅಂಬೇಡ್ಕರ್‌ ಕಾಲೇಜು, ಮೂಡಲಪಾಳ್ಯ, ಗೋವಿಂದರಾಜ ನಗರ, ವಿಜಯನಗರ ಮಾರ್ಗವಾಗಿ ಹೋಗುವ ವಾಹನಗಳು ಗೋವಿಂದರಾಜ ನಗರದಲ್ಲಿನ ಸರ್ವಜ್ಞ ಶಾಲೆ ಪಕ್ಕದ ಜಿ.ಟಿ.ಟಿ.ಇ. ಹಾಸ್ಟೆಲ್‌ ಮುಂಭಾಗ ನಿಲ್ಲುತ್ತದೆ.

ಈ ಸ್ಥಳದಲ್ಲಿ ಪ್ರಯಾಣಿಕರ ತಂಗುದಾಣ ಇಲ್ಲದೇ ಪ್ರಯಾಣಿಕರು ಬಿಸಿಲು, ಗಾಳಿ, ಮಳೆಯಲ್ಲಿಯೇ ನಿಲ್ಲಬೇಕಿದೆ. ಆದ್ದರಿಂದ ವಿಜಯನಗರದಿಂದ ಉದ್ಯಾನಕ್ಕೆ  (ರಹೇಜ ಅಪಾರ್ಟ್‌ಮೆಂಟ್‌) ಹೋಗುವ ಜಿ.ಟಿ.ಟಿ.ಇ. ಹಾಸ್ಟೆಲ್‌ ಮುಂಭಾಗ ಒಂದು ಪ್ರಯಾಣಿಕರ ತಂಗುದಾಣ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.