ADVERTISEMENT

ತಡ ಬೇಡ

ಕೆ.ಎಲ್‌.ಪ್ರಕಾಶ
Published 20 ಡಿಸೆಂಬರ್ 2015, 19:30 IST
Last Updated 20 ಡಿಸೆಂಬರ್ 2015, 19:30 IST

ಬಿ.ಇಡಿ. ಕಲಿಕೆಯನ್ನು ಒಂದು ವರ್ಷದ ಕೋರ್ಸ್‌ನಿಂದ ಎರಡು ವರ್ಷದ ಅವಧಿಗೆ ಮಾರ್ಪಡಿಸಲಾಗಿದೆ. ಒಂದು ವರ್ಷದ ಕೋರ್ಸ್‌ ಆಗಿದ್ದಾಗಲೂ ಶೈಕ್ಷಣಿಕ  ವರ್ಷ ಆರು ತಿಂಗಳು ತಡವಾಗಿ ಆರಂಭವಾಗುತ್ತಿತ್ತು. ಪರಿಣಾಮವಾಗಿ ಆರು ತಿಂಗಳು ತಡವಾಗಿ (ನವೆಂಬರ್‌– ಡಿಸೆಂಬರ್‌) ಪೂರ್ಣಗೊಳ್ಳುತ್ತಿತ್ತು. ಹೀಗಾಗಿ ಆಗಲೂ ಈ ಕೋರ್ಸ್‌ ಒಂದು ರೀತಿ  ಎರಡು ವರ್ಷದ ಅವಧಿಯದೇ  ಆಗಿತ್ತು. ಮುಂದಿನ ವ್ಯಾಸಂಗಕ್ಕಾಗಿ ಮತ್ತೆ ಆರು ತಿಂಗಳು ಕಾಯಬೇಕಾಗುತ್ತಿತ್ತು.

ಈಗ ಕೋರ್ಸ್ ಅವಧಿ ಹೆಚ್ಚಿಸಲಾಗಿದೆ. ವೇಳಾಪಟ್ಟಿ ಅನುಸಾರ ಶೈಕ್ಷಣಿಕ ವರ್ಷ ಶುರುವಾಗದಿದ್ದರೆ ಮತ್ತೆ ಅದೇ ಪಾಡು ಪುನರಾವರ್ತನೆ ಆಗುವ ಸಾಧ್ಯತೆ ಇದೆ. ಅದರಿಂದ ಸಮಯ ವ್ಯರ್ಥವಾಗುತ್ತದೆ.  ಇಲಾಖೆಯು ಈಗಲಾದರೂ ಶೈಕ್ಷಣಿಕ ವರ್ಷದ ಆರಂಭದಲ್ಲೇ ಅಂದರೆ ಜೂನ್‌ ತಿಂಗಳಲ್ಲೇ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಅದಾದ ಕೂಡಲೇ ತರಗತಿಗಳನ್ನು ಆರಂಭಿಸಲು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.